ಬಿಬಿಎಂಪಿ ವ್ಯಾಪಿಯಲ್ಲಿ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ ಕಾರ್ಯಕ್ರಮದ (PCV)ಉದ್ಘಾಟನೆ | ಜನತಾ ನ್ಯೂಸ್

13 Nov 2021
280

ಬೆಂಗಳೂರು : ಬಿಬಿಎಂಪಿ ವ್ಯಾಪಿಯಲ್ಲಿ ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ ಕಾರ್ಯಕ್ರಮದ(PCV)ಉದ್ಘಾಟನೆಯನ್ನು ನಿನ್ನೆ 12 ನವೆಂಬರ್ 2021 ವಿಶೇಷ ಆಯುಕ್ತರು(ಆರೋಗ್ಯ) ರವರು ನೆರವೇರಿಸಿದರು.

ನಮ್ಮ ರಾಜ್ಯದಲ್ಲಿ, ಪಿಸಿವಿ ಅನ್ನು 22 ಅಕ್ಟೋಬರ್ 2021 ರಂದು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಿಂದ ಪ್ರಾರಂಭಿಸಲಾಯಿತು. ನಿನ್ನೆ “ವಿಶ್ವ ನ್ಯುಮೋನಿಯಾ ದಿನ” ದ ಪ್ರಯುಕ್ತ ಬಿಬಿಎಂಪಿ ವಿಶೇಷ ಆಯುಕ್ತರು(ಆರೋಗ್ಯ) ತ್ರಿಲೋಕ್ ಚಂದ್ರ ರವರು ಪಿಸಿವಿ ಲಸಿಕೆಯನ್ನು ದಾಸಪ್ಪ ಆಸ್ಪತ್ರೆಯಲ್ಲಿ(ಟೌನ್ ಹಾಲ್ ಬಳಿ) “ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ” ಅಡಿಯಲ್ಲಿ ಪರಿಚಯಿಸುವುದರ ಜೊತೆಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನ್ಯುಮೋನಿಯಾ ದಿಂದ ಉಂಟಾಗುವ ಸಾವು ಹಾಗೂ ಗಂಭೀರತೆಯನ್ನು ಕಡಿಮೆ ಮಾಡುವ ಬಗ್ಗೆ ಜನ ಜಾಗೃತಿ ಮೂಡಿಸಿದರು. ಮುಖ್ಯಾರೋಗ್ಯಾಧಿಕಾರಿಗಳಾದ(ಸಾ.ಆ ಮತ್ತು ಕ್ಲೀನಿಕಲ್) ಡಾ. ವಿಜೇಂದ್ರ, ನಿರ್ಮಲಾ ಬುಗ್ಗಿ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳು, ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ನ್ಯುಮೋಕೊಕಲ್ ಕಾಯಿಲೆಯು ಬ್ಯಾಕ್ಟೀರಿಯಂ ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ(ನ್ಯುಮೋಕೊಕಸ್) ನಿಂದ ಉಂಟಾಗುವ ರೋಗಗಳ ಗುಂಪಿನ ಹೆಸರು. ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ 5 ರ‍್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಬ್ಯಾಕ್ಟೀರಿಯಾದ ನ್ಯುಮೋನಿಯಾಕ್ಕೆ ಪ್ರಮುಖ ಕಾರಣವಾಗಿದೆ. ಚಿಕ್ಕ ಮಕ್ಕಳು (ವಿಶೇಷವಾಗಿ 2 ರ‍್ಷಕ್ಕಿಂತ ಕಡಿಮೆ ವಯಸ್ಸಿನವರು), ವಯಸ್ಸಾದವರು, ರೋಗನಿರೋಧಕ ಶಕ್ತಿ ಕಡಿಮೆಯಾದವರು, ಅಪೌಷ್ಟಿಕತೆ ಹೊಂದಿರುವವರು ನ್ಯುಮೋಕೊಕಲ್ ಕಾಯಿಲೆಗೆ ಒಳಗಾಗುವ ಸಾಧ್ಯತೆ ಹೆಚ್ಚಿಸುತ್ತದೆ.

ಭಾರತದಲ್ಲಿ 1.2 ದಶಲಕ್ಷಕ್ಕೂ ಹೆಚ್ಚು ಮಕ್ಕಳು ತಮ್ಮ 5ನೇ ಹುಟ್ಟುಹಬ್ಬದ ಮೊದಲು ಸಾಯುತ್ತಾರೆ. ಸುಮಾರು 15.9% ಸಾವುಗಳು ನ್ಯುಮೋನಿಯಾದಿಂದ ಸಂಭವಿಸುತ್ತವೆ. 2015 ರಲ್ಲಿ, ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾವು ಸುಮಾರು 1.6 ಮಿಲಿಯನ್ ತೀವ್ರವಾದ ನ್ಯುಮೋಕೊಕಲ್ ಕಾಯಿಲೆಯ (ತೀವ್ರವಾದ ನ್ಯುಮೋನಿಯಾ ಮತ್ತು ಮೆನಿಂಜೈಟಿಸ್ ಸೇರಿದಂತೆ) ಮತ್ತು 1-59 ತಿಂಗಳ ವಯಸ್ಸಿನ ಮಕ್ಕಳಲ್ಲಿ ಸುಮಾರು 68,700 ಸಾವುಗಳಿಗೆ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.

ಪಿಸಿವಿ ಸುರಕ್ಷಿತವಾಗಿದೆ ಮತ್ತು ನ್ಯುಮೋಕೊಕಲ್ ರೋಗವನ್ನು ತಡೆಗಟ್ಟಲು ಪರಿಣಾಮಕಾರಿ ಲಸಿಕೆಗಳು ಲಭ್ಯವಿದೆ. ಪಿಸಿವಿ ನ್ಯುಮೋನಿಯಾ, ಮೆನಿಂಜೈಟಿಸ್ ಮತ್ತು ನ್ಯುಮೋಕೊಕಸ್‌ನಿಂದ ಉಂಟಾಗುವ ಇತರ ಗಂಭೀರ ಬ್ಯಾಕ್ಟೀರಿಯಾದ ಸೋಂಕುಗಳ ಸಂಭವವನ್ನು ಕಡಿಮೆ ಮಾಡುತ್ತದೆ. ಪಿಸಿವಿಯು ಪ್ರತಿರೋಧಕ ಶಕ್ತಿ ಕಡಿಮೆ ಇರುವ ಚಿಕ್ಕ ಮಕ್ಕಳಿಗೆ, ನ್ಯುಮೋಕೊಕಲ್ ಕಾಯಿಲೆಯ ಗಣನೀಯ ಅಪಾಯವನ್ನು ಹೊಂದಿರುವ ವಯಸ್ಕರಿಗೆ (ಉದಾ, ಎಚ್‌ಐವಿ ಸೋಂಕಿತ) ಮತ್ತು ವಯಸ್ಕರಿಗೆ ರಕ್ಷಣೆ ನೀಡುತ್ತದೆ. ನ್ಯುಮೋನಿಯಾ ಮತ್ತು ಮೆನಿಂಜೈಟಿಸ್‌ನಂತಹ ಇತರ ರೋಗಗಳನ್ನು ಹಿಬ್, ಪರ‍್ಟುಸಿಸ್, ದಡಾರ, ಇನಗಪ್ಲುಯೆನ್ಜ ಮತ್ತು ರೋಗನಿರೋಧಕಗಳ ಮೂಲಕ ತಡೆಗಟ್ಟಬಹುದಾಗಿದೆ.

ಪಿಸಿವಿ ಅನ್ನು ಮೊದಲು USA ನಲ್ಲಿ 2000 ರಲ್ಲಿ ಪ್ರಾರಂಭಿಸಲಾಯಿತು. 2020 ಜೂನ್ ವರೆಗೆ, 146 ದೇಶಗಳು ಪಿಸಿವಿ ಅನ್ನು ಪರಿಚಯಿಸಿವೆ. 2011 ರಲ್ಲಿ ಪಿಸಿವಿ ಅನ್ನು ಪರಿಚಯಿಸಿದ ಮೊದಲ ದೇಶ ಏಷ್ಯಾದಲ್ಲಿ ಖಂಡದ ಕಝಾಕಿಸ್ತಾನ್ ದೇಶವಾಗಿದೆ. ಭಾರತದಲ್ಲಿ ಪಿಸಿವಿ ಲಸಿಕೆಯನ್ನು 2017 ರಲ್ಲಿ ಹಂತ-ವಾರು ರೀತಿಯಲ್ಲಿ ಪರಿಚಯಿಸಲಾಯಿತು(ಬಿಹಾರ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರ ಪ್ರದೇಶ). ಈಗ ಪಿಸಿವಿ ಪರಿಚಯವನ್ನು ಎಲ್ಲಾ ರಾಜ್ಯಗಳು/UTಗಳಲ್ಲಿ ಇಡೀ ದೇಶದಲ್ಲಿ ಯೋಜಿಸಲಾಗಿದೆ.

ಪಿಸಿವಿ ಹಲವಾರು ವರ್ಷಗಳಿಂದ ಖಾಸಗಿ ವಲಯದಲ್ಲಿ ಬಳಕೆಯಲ್ಲಿದೆ. ಆದಾಗ್ಯೂ ಲಸಿಕೆಯನ್ನು ನಿಭಾಯಿಸಬಲ್ಲ ಸಣ್ಣ ಜನಸಂಖ್ಯೆಗೆ ಲಸಿಕೆಯನ್ನು ಸೀಮಿತಗೊಂಡಿದೆ ರೋಗದ ಹೊರೆ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ, ವೆಚ್ಚ-ಪರಿಣಾಮಕಾರಿತ್ವ, ಸರ‍್ಥನೀಯತೆ ಮತ್ತು ಜಾಗತಿಕ ಪುರಾವೆಗಳ ಆಧಾರದ ಮೇಲೆ ಲಸಿಕೆಯನ್ನು ಯುಐಪಿಯಲ್ಲಿ ಸೇರಿಸಬೇಕೆಂದು NTAGI ಶಿಫಾರಸು ಮಾಡಿದೆ.

ಪಿಸಿವಿ ವೇಳಾಪಟ್ಟಿ: ಒಂದೂವರೆ ತಿಂಗಳು ಮತ್ತು ಮೂರುವರೆ ತಿಂಗಳುಗಳಲ್ಲಿ 2 ಪ್ರಾಥಮಿಕ ಡೋಸ್‌ಗಳು (6 ವಾರಗಳು ಮತ್ತು 14 ವಾರಗಳು) ಮತ್ತು 9 ತಿಂಗಳ ವಯಸ್ಸಿನಲ್ಲಿ 1 ಬೂಸ್ಟರ್ ಡೋಸ್.

RELATED TOPICS:
English summary :Pneumococcal Conjugate Vaccine Programme (PCV)Launch in BBMP

ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2  ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2 ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ  | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#

ನ್ಯೂಸ್ MORE NEWS...