ಒಂದು ರಾಷ್ಟ್ರ, ಒಂದು ಶಾಸಕಾಂಗ ವೇದಿಕೆ, ನನ್ನ ಒಂದು ವಿಚಾರ - ಪ್ರಧಾನಿ ಮೋದಿ | ಜನತಾ ನ್ಯೂಸ್

17 Nov 2021
332

ನವದೆಹಲಿ : ಒಂದು ರಾಷ್ಟ್ರ, ಒಂದು ಶಾಸಕಾಂಗ ವೇದಿಕೆ - ನನ್ನ ನನ್ನ ಆಲೋಚನೆಗಳಲ್ಲಿ ಒಂದು, ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅವರು ಇಂದು ಶಿಮ್ಲಾದಲ್ಲಿ ನಡೆದ 82ನೇ ಅಖಿಲ ಭಾರತ ಅಧ್ಯಕ್ಷಿಯ ಅಧಿಕಾರಗಳ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಇತ್ತೀಚಿಗೆ ನಾವು, "ಒಂದು ರಾಷ್ಟ್ರ, ಒಂದು ರೇಶನ್ ಕಾರ್ಡ್", ಹಾಗೆಯೇ, "ಒಂದು ರಾಷ್ಟ್ರ, ಒಂದು ಮೊಬಿಲಿಟಿ ಕಾರ್ಡ್"ನ್ನು ಜಾರಿಗೆ ತಂದಿದ್ದೇವೆ. ಇದರಿಂದ ದೇಶ ಉತ್ತರದಿಂದ ದಕ್ಷಿಣ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ ಸಂಪರ್ಕಿಸುತ್ತಿರುವ ಅನುಭವವಾಗುತ್ತಿದೆ. ಹಾಗೆಯೇ, ನನ್ನ ವಿಚಾರಗಳಲ್ಲಿ ಒಂದು "ಒಂದು ರಾಷ್ಟ್ರ ಒಂದು ಶಾಸಕಾಂಗ" ವೇದಿಕೆ - ಇದು ನಮ್ಮ ಸಂಸದೀಯ ವ್ಯವಸ್ಥೆಗೆ ತಾಂತ್ರಿಕ ಉತ್ತೇಜನವನ್ನು ನೀಡುವುದಲ್ಲದೆ, ರಾಷ್ಟ್ರದ ಪ್ರಜಾಸತ್ತಾತ್ಮಕ ಘಟಕಗಳನ್ನು ಸಂಪರ್ಕಿಸಲು ಕೆಲಸ ಮಾಡುತ್ತದೆ, ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತಕ್ಕೆ ಪ್ರಜಾಪ್ರಭುತ್ವವು ಕೇವಲ ಒಂದು ವ್ಯವಸ್ಥೆಯಲ್ಲ. ಪ್ರಜಾಪ್ರಭುತ್ವವು ಭಾರತದ ಸ್ವಭಾವ ಮತ್ತು ಅದರ ಸಹಜ ಪ್ರವೃತ್ತಿಯಾಗಿದೆ, ಎಂದು ಪ್ರಧಾನಿ ಮೋದಿ ಪುನರ್ರುಚ್ಚರಿಸಿದ್ದಾರೆ.

ಮುಂಬರುವ ವರ್ಷಗಳಲ್ಲಿ ನಾವು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಬೇಕಾಗಿದೆ. ನಾವು ಅಸಾಧಾರಣ ಗುರಿಗಳನ್ನು ಸಾಧಿಸಬೇಕಾಗಿದೆ. ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ ಈ ಸಂಕಲ್ಪ ಪೂರ್ಣಗೊಳ್ಳಲು ಸಾಧ್ಯ. ನಾವು ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಪ್ರಯತ್ನಗಳ ಬಗ್ಗೆ ಮಾತನಾಡುವಾಗ, ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ, ಎಲ್ಲಾ ರಾಜ್ಯಗಳ ಪಾತ್ರವು ಅದರ ಪ್ರಮುಖ ಅಡಿಪಾಯವಾಗಿದೆ, ಎಂದು ಪ್ರಧಾನಿ ಹೇಳಿದ್ದಾರೆ.

ಇದು ಈಶಾನ್ಯದ ದೀರ್ಘಾವಧಿಯ ಸಮಸ್ಯೆಗಳಿಗೆ ಪರಿಹಾರವಾಗಲಿ ಅಥವಾ ದಶಕಗಳಿಂದ ಸ್ಥಗಿತಗೊಂಡಿರುವ ದೊಡ್ಡ ಅಭಿವೃದ್ಧಿ ಯೋಜನೆಗಳ ಪೂರ್ಣಗೊಳಿಸುವಿಕೆಯಾಗಿರಲಿ - ಕಳೆದ ಕೆಲವು ವರ್ಷಗಳಲ್ಲಿ ಪ್ರತಿಯೊಬ್ಬರ ಪ್ರಯತ್ನದಿಂದ ರಾಷ್ಟ್ರವು ಪೂರ್ಣಗೊಳಿಸಿದ ಇಂತಹ ಹಲವಾರು ಕೆಲಸಗಳಿವೆ. ದೊಡ್ಡ ಉದಾಹರಣೆ- ಕರೋನಾ - ನಮ್ಮ ಮುಂದಿದೆ. ರಾಷ್ಟ್ರವು ಎಲ್ಲಾ ರಾಜ್ಯಗಳನ್ನು ಒಟ್ಟುಗೂಡಿಸಿ ಒಗ್ಗಟ್ಟಿನಿಂದ ಈ ದೊಡ್ಡ ಯುದ್ಧವನ್ನು ನಡೆಸಿತು, ಇದು ಸ್ವತಃ ಐತಿಹಾಸಿಕವಾಗಿದೆ. ಇಂದು ಭಾರತವು 110 ಕೋಟಿ ಲಸಿಕೆ ಡೋಸ್‌ಗಳ ಮೈಲಿಗಲ್ಲನ್ನು ದಾಟಿದೆ. ಒಂದು ಕಾಲದಲ್ಲಿ ಅಸಾಧ್ಯ ಎನಿಸಿದ್ದು ಈಗ ಸಾಧ್ಯವಾಗುತ್ತಿದೆ, ಎಂದು ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ.

RELATED TOPICS:
English summary :One of my ideas is of "One Nation One Legislative" platform

ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕೋವಿಡ್19 ನಿಯಂತ್ರಣಕ್ಕೆ ಕಟ್ಟೆಚ್ಚರ : ಗಡಿ, ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ - ಸಿಎಂ | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಕುಟುಂಬ ಆಧಾರಿತ ಪಕ್ಷಗಳು ಸಂವಿದಾನದ ವಿರುದ್ಧ - ಪರಿವಾರದ ಪಾರ್ಟಿ ವಿರುದ್ಧ ಪ್ರಧಾನಿ ಮೋದಿ ಗುಡುಗು | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಮತದಾರರ ವಿಶೇಷ ನೊಂದಣಿ ಅಭಿಯಾನ ಮೂರು ಭಾನುವಾರಗಳಲ್ಲಿ 13129 ಅರ್ಜಿಗಳು ಸ್ವೀಕೃತ: | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2  ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಫ್ರಾನ್ಸ್ ನಿಂದ ಬಂದ 2 ಮಿರಾಜ್ ಯುದ್ಧ ವಿಮಾನ : ಭಾರತೀಯ ವಾಯುಪಡೆ ಬಲವರ್ಧನೆ | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಪ್ರತಿ ಮನೆ-ಮನೆಗೆ ಕೋವಿಡ್ ಲಸಿಕೆ ನೀಡುವ ಸಲುವಾಗಿ ಲಸಿಕೆ ವಾಹನಗಳಿಗೆ ಚಾಲನೆ: ಬಿಬಿಎಂಪಿ ಮುಖ್ಯ ಆಯುಕ್ತರು | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಅಪ್ಪುಗೆ ಕರ್ನಾಟಕ ರತ್ನ ಸಿಕ್ಕಿದ್ರೆ ಅಂಬರೀಶ್​ಗೂ ಸಿಕ್ಕಿದಂತೆ! | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್​ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ನಮ್ಮ ಅಭ್ಯರ್ಥಿಗೇನು ತೊಂದರೆ ಇಲ್ಲ! | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ  | ಜನತಾ ನ್ಯೂ&#
ಕಲಬುರಗಿ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ: ಪೈಪ್, ಬಕೆಟ್‍ನಲ್ಲಿ ಕಂತೆ ಕಂತೆ ಹಣ | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
26/11 ದಾಳಿಗೆ ಪ್ರತಿಕ್ರಿಯೆ ನೀಡದ ಕಾಂಗ್ರೆಸ್ ಸರ್ಕಾರದ ಬಗ್ಗೆ ಬರೆದ ಮನೀಶ್ ತಿವಾರಿ ವಿರುದ್ಧ ಶಿಸ್ತು ಕ್ರಮ? | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಗದಗ ಕೃಷಿ ಇಲಾಖೆಯ ಜೆ.ಡಿ ಮನೆ ಮೇಲೆ ACB ದಾಳಿ: ₹ಕೋಟ್ಯಂತರ ಮೌಲ್ಯದ ನಗ-ನಗದು ಪತ್ತೆ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#
ಬಾಲಕಿ ಮೇಲೆ ಗ್ಯಾಂಗ್​ರೇಪ್,​ ಕೊಲೆ: ನಾಲ್ವರು ಆರೋಪಿಗಳ ಬಂಧನ | ಜನತಾ ನ್ಯೂ&#

ನ್ಯೂಸ್ MORE NEWS...