ಮಗಳ ತಿಥಿ ಮಾಡಲು ಬಂದ ಅಪ್ಪ ಅಳಿಯನ ಮುಂದೆಯೇ ಆತ್ಮಹತ್ಯೆಗೆ ಶರಣು! | ಜನತಾ ನ್ಯೂಸ್

09 Dec 2021
518

ಹಾಸನ : ಮಗಳ ತಿಂಗಳ ತಿಥಿ ಮಾಡಲು ಬಂದಿದ್ದ ತಂದೆ ಅಳಿಯನ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ದುರಂತ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಮಾಳೆಗೆರೆ ಗ್ರಾಮದಲ್ಲಿ ನಡೆದಿದೆ.

ದೊಡ್ಡಗದ್ದವಳ್ಳಿ ಗ್ರಾಮದ ನಾಗರಾಜ್ (55) ಮೃತ ವ್ಯಕ್ತಿ. ಮೃತರ ಪುತ್ರಿ ಹೇಮಶ್ರೀ ಅ.30 ರಂದು ಸಾವನ್ನಪ್ಪಿದ್ದರು. ಒಂದೂವರೆ ವರ್ಷದ ಹಿಂದೆ ಮಾಳೆಗೆರೆ ಗ್ರಾಮದ ಪ್ರವೀಣ್ ಗೆ ಹೇಮಶ್ರೀಯನ್ನು ಮದುವೆ ಮಾಡಿಕೊಡಲಾಗಿತ್ತು. 1.50 ಲಕ್ಷ ನಗದು, 40 ಗ್ರಾಂ‌ ಚಿನ್ನವನ್ನು ಪ್ರವೀಣ್​ಗೆ ವರದಕ್ಷಿಣೆಯಾಗಿ ನೀಡಲಾಗಿತ್ತು. ಪ್ರವೀಣ್ ಆಂಧ್ರಪ್ರದೇಶದಲ್ಲಿ ಬೇಕರಿ ಇಟ್ಟುಕೊಂಡಿದ್ದ.

ಮಗಳ ತಿಂಗಳ ತಿಥಿ ಕಾರ್ಯ ಮಾಡಲು ನಾಗರಾಜ್​ ನಿನ್ನೆ ಮಾಳೆಗೆರೆ ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಈ ಸಮಯದಲ್ಲಿ ಅಳಿಯ ಪ್ರವೀಣ್ ಹಾಗೂ ಆತನ ಕುಟುಂಬಸ್ಥರು ಮನೆಗೆ ಬೀಗ ಹಾಕಿಕೊಂಡು ಎಲ್ಲೋ ತಲೆ ಮರೆಸಿಕೊಂಡಿದ್ದರು.

ಮಗಳ ತಿಥಿ ಕಾರ್ಯಕ್ಕೆ ಮಾಡಲು ಬೆಳಗ್ಗೆಯಿಂದ ಕಾದರು ಯಾರು ಬಾರದ ಹಿನ್ನೆಲೆಯಲ್ಲಿ, ಮನೆಯ ಬಾಗಿಲ ಬಳಿಯೇ ಎಡೆ ಇಟ್ಟಿರೋ ನಾಗರಾಜ್​, ನಂತರ ಮೊಬೈಲ್​​ನಲ್ಲಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನನ್ನ ಮಗಳ ಸಾವಿಗೆ ಪತಿ ಪ್ರವೀಣ್, ಅತ್ತೆ ಭದ್ರಮ್ಮ ಕಾರಣ ಎಂದು ವಿಡಿಯೋದಲ್ಲಿ ನಾಗರಾಜ್​ ಹೇಳಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಕೊಂದಿದ್ದಾರೆ. ನನಗೆ, ನನ್ನ ಮಗಳಿಗೆ ಬಂದ ಪರಿಸ್ಥಿತಿ ಇನ್ಯಾರಿಗೂ ಬರಬಾರದು. ಸಾಯುವವರೆಗೂ ಅವರನ್ನು ಜೈಲಿಗೆ ಹಾಕಿ ಎಂದು ಮೊಬೈಲ್ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರೇಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

RELATED TOPICS:
English summary :Hasan

ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು   | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#

ನ್ಯೂಸ್ MORE NEWS...