ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ, ಸ್ಥಾನಮಾನ ಶಾಶ್ವತವಲ್ಲ: ಬಸವರಾಜ ಬೊಮ್ಮಾಯಿ | ಜನತಾ ನ್ಯೂಸ್

19 Dec 2021
429

ಹಾವೇರಿ : ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ ಹೇಳಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಮಾತನಾಡಿದ ಅವರು, ಸ್ಥಾನಮಾನ ಶಾಶ್ವತವಲ್ಲ ಎಂದು ತಿಳಿಸಿದ್ದಾರೆ. ಅವರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಇದು ಸಂತರ ನಾಡು. ವೈಚಾರಿಕ ಕ್ರಾಂತಿ ಮಾಡಿದ ಗುರುಗಳಿದ್ದಾರೆ. ಕನಕದಾಸರು, ಸಂತ ಶಿಶುನಾಳ ಷರೀಫರು ಇದ್ದಂತಹ ತಾಲೂಕಿದು. ಯಾವುದೂ ಶಾಶ್ವತವಲ್ಲ, ಈ ಬದುಕು ಕೂಡ ಶಾಶ್ವತವಲ್ಲ. ನಾವು ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ, ಸ್ಥಾನಮಾನ ಶಾಶ್ವತವಲ್ಲ. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ.

ಶಿಗ್ಗಾಂವಿ ಕ್ಷೇತ್ರದ ಹೊರಗೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಕ್ಷೇತ್ರಕ್ಕೆ ಬಂದಾಗ ನಿಮ್ಮ ಬಸವರಾಜ ಬೊಮ್ಮಾಯಿ ಆಗಿರುವೆ ಎಂದು ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ನಡೆದ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಹಾಗೂ ಸಮುದಾಯ ಭವನದ ಅಡಿಗಲ್ಲು ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಿ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ನಾನೇನು ಕೆಲಸ ಮಾಡಿದ್ರೂ ಆ ಋಣ ತೀರಿಸಲು ಆಗೋದಿಲ್ಲ ಎಂದು ಭಾವುಕರಾದರು

ನಿಮ್ಮ ಪ್ರೀತಿ ವಿಶ್ವಾಸವನ್ನು ಶಾಶ್ವತವಾಗಿ ಉಳಿಸಿಕೊಂಡು ಹೋಗುವೆ. ಎಲ್ಲ ಸಮುದಾಯಗಳ ಭಾವನೆಗೆ ಸ್ಪಂದಿಸುವುದು ನನ್ನ ಜವಾಬ್ದಾರಿ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಒಂದು ರಾಜ್ಯ ಪಡೆಯಲು, ವಿಸ್ತರಣೆಗಾಗಿ ಚೆನ್ನಮ್ಮ ಹೋರಾಡಿರಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ, ಸ್ವಾಭಿಮಾನಕ್ಕೆ ಹೋರಾಟ ಮಾಡಿದ್ದಳು. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಎಲ್ಲ ಸಮುದಾಯದವರನ್ನು ಸೇರಿಸಿ ರಾಜ್ಯ ಉಳಿಸುವ ಕೆಲಸ ಮಾಡಿದ್ದರು.

ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಚೆನ್ನಮ್ಮ ಕುಸಿದುಹೋಗಿದ್ದರು. ಅಲ್ಲಿಯವರೆಗೆ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಮುಂದೆ ಕುಸಿದಿರಲಿಲ್ಲ. ಕಿತ್ತೂರು ಚೆನ್ನಮ್ಮ ಅಂದು ಯುದ್ಧ ಮಾಡಿದ್ದನ್ನು ನೆನಪಿಸಿಕೊಳ್ತೇವೆ. ಸಾಧಕರಿಗೆ ಸಾವು ಅಂತ್ಯವಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪಕ್ಷದ ಆಂತರಿಕ ವಲಯದಲ್ಲಿ ನಡೆಯುತ್ತಿರುವ ಚರ್ಚೆಗಳು ನಿಜವಾಗಬಹುದೇ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಜನವರಿಯಲ್ಲಿ, ಸಂಕ್ರಾಂತಿಯಲ್ಲಿ ಕ್ರಾಂತಿಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸ್ವಕ್ಷೇತ್ರದಲ್ಲಿ ಇಂದು ಅವರು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

RELATED TOPICS:
English summary :Basavaraj bommai

ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು   | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#

ನ್ಯೂಸ್ MORE NEWS...