ಬೆಂಗಳೂರಲ್ಲಿ ಮಹಿಳೆಗೆ ಖಾಸಗಿ ಅಂಗ ತೋರಿಸಿದ ಹೆಡ್ಕಾನ್ಸ್ಟೇಬಲ್ ಅಮಾನತು! | ಜನತಾ ನ್ಯೂಸ್
ಬೆಂಗಳೂರು : ಡಿ.20 ಸೋಮವಾರ ರಾತ್ರಿ ಮಹಿಳೆಯೊಬ್ಬರು ಮನೆಯ ಬಳಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದರು. ಈ ವೇಳೆ ಮಹಿಳೆಯ ಬಳಿ ಬಂದ ಪಾನಮತ್ತ ಪೇದೆ ಖಾಸಗಿ ಅಂಗವನ್ನು ತೋರಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ.
ಮಹಿಳೆಯೊಂದಿಗೆ ಅನುಚಿತ ವರ್ತನೆ ತೋರಿದ ಆರೋಪದಡಿ ಅಮೃತಹಳ್ಳಿ ಠಾಣೆಯ ಹೆಡ್ಕಾನ್ಸ್ಟೇಬಲ್ ವಿರುದ್ಧ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಯಲಹಂಕ ನ್ಯೂಟೌನ್ನ ಹೌಸಿಂಗ್ ಬೋರ್ಡ್ ಬಳಿ ಮೂತ್ರ ವಿಸರ್ಜನೆಗೆ ಹೆಡ್ಕಾನ್ಸ್ಟೇಬಲ್ ಚಂದ್ರಶೇಖರ್ ಬೈಕ್ ನಿಲ್ಲಿಸಿದ್ದರು. ಈ ವೇಳೆ ಮಹಿಳೆಯೊಬ್ಬರು ಬೀದಿ ಬದಿಯ ನಾಯಿಗಳಿಗೆ ಊಟ ನೀಡಲು ಬಂದಿದ್ದರು. ಈ ಸಮಯಲ್ಲಿ ಚಂದ್ರಶೇಖರ್ ಮಹಿಳೆಗೆ ಮರ್ಮಾಂಗ ತೋರಿಸಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ.
ಸ್ಥಳೀಯರು ಪೇದೆಯ ವಿಡಿಯೋ ಮಾಡಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಪೇದೆ ಹೈಡ್ರಾಮಾವನ್ನೇ ಮಾಡಿದ್ದಾನೆ. ಅತ್ತುಕರೆದು ವಿಡಿಯೋ ಮಾಡದಂತೆ ಬೇಡಿಕೊಂಡಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಈಶಾನ್ಯ ವಿಭಾದ ಡಿಸಿಪಿ ಭಾವಾ ಅವರು ಆರೋಪಿತ ಪೇದೆ ಚಂದ್ರಶೇಖರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.