ವರ್ಷಾಂತ್ಯದಲ್ಲಿ ರಾಹುಲ್ ಗಾಂಧಿ ವಿದೇಶ ಪ್ರವಾಸ : ಪಂಜಾಬ್ ಚುನಾವಣಾ ಕಾಂಗ್ರೆಸ್ ರ್ಯಾಲಿ ರದ್ದು | ಜನತಾ ನ್ಯೂಸ್

31 Dec 2021
424

ನವದೆಹಲಿ : ಹೊಸ ವರ್ಷ ಸಮೀಪಿಸುತ್ತಿದ್ದಂತೆ ಮತ್ತು ಇನ್ನೇನು ಐದು ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳುಗಳಿರುವಾಗ, ಮಾಜಿ ಕಾಂಗ್ರೆಸ್ ರಾಷ್ತ್ರಿಯಾಧ್ಯಕ್ಷ ಮತ್ತು ವಯನಾಡು ಸಂಸದ ರಾಹುಲ್ ಗಾಂಧಿ ಬುಧವಾರ ಬೆಳಿಗ್ಗೆ "ವೈಯಕ್ತಿಕ ಭೇಟಿ" ಗಾಗಿ ವಿದೇಶಕ್ಕೆ ಹಾರಿದ್ದಾರೆ.

ಆದ್ದರಿಂದ, ಸಧ್ಯದಲ್ಲೇ ಅವರು ಭಾಗವಹಿಸಬೇಕಿದ್ದ ಪಂಜಾಬ್ ಚುನಾವಣಾ ರ್ಯಾಲಿ ಗಳನ್ನೂ ಮುಂದುಡುವ ಸಾದ್ಯತೆಗಳಿವೆ.

ವಿದೇಶದಿಂದ ಹಿಂತಿರುಗಿದ ಬಳಿಕ ರಾಹುಲ್ ಗಾಂಧಿ ಅವರು 2022 ರ ಜನವರಿ 15 ಮತ್ತು 16 ನೇ ಜನವರಿಯಲ್ಲಿ ಕ್ರಮವಾಗಿ ಪಂಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಎಂದು ಎಏನ್ಐ ಟ್ವೀಟ್ ಮಾಡಿದೆ.

ಇತ್ತೀಚೆಗಷ್ಟೇ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ಸುಮಾರು ಒಂದು ತಿಂಗಳ ಕಾಲ ವಿದೇಶ ಪ್ರವಾಸ ಕೈಗೊಂಡಿದ್ದ ಅವರು ಅಧಿವೇಶನ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ವಾಪಸ್ಸಾಗಿದ್ದರು.

"ರಾಹುಲ್ ಗಾಂಧಿ ಅವರು ಸಂಕ್ಷಿಪ್ತ ವೈಯಕ್ತಿಕ ಭೇಟಿಯಲ್ಲಿದ್ದಾರೆ. ಭಾರತೀಯ ಜನತಾ ಪಕ್ಷ(ಬಿಜೆಪಿ) ಮತ್ತು ಅದರ ಮಾಧ್ಯಮ ಸ್ನೇಹಿತರು ಅನಗತ್ಯವಾಗಿ ವದಂತಿಗಳನ್ನು ಹರಡಬಾರದು" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ ಎಎನ್‌ಐಗೆ ತಿಳಿಸಿದ್ದಾರೆ.

ರಾಹುಲ್ ಗಾಂಧಿಯವರ ಗೌಪ್ಯ ವಿದೇಶ ಪ್ರವಾಸಗಳನ್ನು ವಿವರವನ್ನು ಬಹಿರಂಗ ಪಡಿಸುವಂತೆ ಬಿಜೆಪಿ ಯಾವಾಗಲೂ ಒತ್ತಾಯಿಸುತ್ತಿದೆ ಹಾಗೂ ಸಾಕಷ್ಟು ಬಾರಿಗೆ ರಾಹುಲ್ ಗಾಂಧಿ ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರೆಂದು ಕಟುವಾಗಿ ಟೀಕಿಸಿದ್ದದು. ಆದರೂ, ರಾಹುಲ್ ಗಾಂಧಿ ಚುನಾವಣೆ ಹೊಸ್ತಿಲಲ್ಲಿ ಹಾಗೂ ಚುನಾವಣೆಯ ನಂತರದ ವಿದೇಶ ಪ್ರವಾಸಗಳ ವಿವರವನ್ನು ಬಹಿರಂಗ ಪಡಿಸಿಲ್ಲ.

ಈ ಬಾರಿಯೂ ಸಹ, ಅವರು ಭೇಟಿ ನೀಡಲಿರುವ ಸ್ಥಳ ಮತ್ತು ಹಿಂದಿರುಗುವ ದಿನಾಂಕವನ್ನು ಪಕ್ಷವು ಬಹಿರಂಗಪಡಿಸಿಲ್ಲ.

ರಾಷ್ಟೀಯ ರಾಜಕಾರಣದಲ್ಲಿ ಸಾಕಷ್ಟು ನಿರ್ಣಾಯಕ ಎನ್ನಲಾದ ಉತ್ತರ ಪ್ರದೇಶ ರಾಜ್ಯ ಸೇರಿದಂತೆ ಮುಂದಿನ ವರ್ಷ ನಡೆಯಲಿರುವ ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಮುಂಬರುವ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ತಮ್ಮ ಪ್ರಚಾರವನ್ನು ವೇಗಗೊಳಿಸುತ್ತಿರುವ ಸಮಯದಲ್ಲಿ ನಿಗದಿತ ರ್ಯಾಲಿ ರದ್ದುಗೊಳಿಸಿ, ರಾಹುಲ್ ಅವರ ವಿದೇಶ ಪ್ರವಾಸವು ಮತ್ತೊಮ್ಮೆ ಕಾಂಗ್ರೆಸ್ ಮುಖಂಡರ ನಿದ್ದೆಗೆಡೆಸಲಿದೆ.

RELATED TOPICS:
English summary :Year end foreign trip of Rahul Gandhi : Panjab election Cong rally postponed

ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ಪಂಜಾಬ್ ಸಿಎಂ ಸಂಬಂಧಿಕನ ಮನೆಯಿಂದ ಇಲ್ಲಿಯವರೆಗೆ 10 ಕೋಟಿ ರೂ. ಜಪ್ತಿ ಮಾಡಿದ ಇಡಿ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ತಂಗಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಅಣ್ಣ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಮಾದಕ ವಸ್ತು ಮಾರಾಟ: ಓರ್ವ ನೈಜೀರಿಯ ಪ್ರಜೆ ಸೀರಿ 4 ಆರೋಪಿಗಳ ಬಂಧನ | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ: ಇನ್ ಸ್ಪೆಕ್ಟರ್, ಎಎಸ್ಸೈ ಅಮಾನತು | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ನೈಟ್​ ಕರ್ಫ್ಯೂ ಹಾಕೋದಾಗಿದ್ರೆ ವ್ಯಾಕ್ಸಿನ್ ಯಾಕೆ ಬೇಕಿತ್ತು? | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಜಗತ್ತಲ್ಲಿ ಮಾಸ್ಕ್ ಹಾಕೊಂಡು ಊಟ ತಿನ್ನಬೇಕು ಅಂತ ಹೇಳೊ ಪಕ್ಷ ಕಾಂಗ್ರೆಸ್ - ಶಾಸಕ ರೇಣುಕಾಚಾರ್ಯ | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು   | ಜನತಾ ನ್ಯೂ&#
ಮದ್ವೆ ನಂತರವೂ ಸಂಬಂಧಿಯೊಂದಿಗೆ ಪ್ರೀತಿ, ಪ್ರೇಮಿಗಳಿಬ್ಬರು ನೇಣಿಗೆ ಶರಣು | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಕೋವಿಡ್ ನಿಯಂತ್ರಣಕ್ಕೆ 15-20 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಶ್ರೀರಂಗಪಟ್ಟಣದ ಮಸೀದಿ ಕೆಡವಿ ಹನುಮ ಮಂದಿರ ಕಟ್ತೀವಿ ಎಂದ ಸ್ವಾಮಿಗೆ 14 ದಿನ ನ್ಯಾಯಾಂಗ ಬಂಧನ | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಆತ್ಮಗಳೊಂದಿಗೆ ಸಂಪರ್ಕ ಸಾದಿಸಲು ನಾಪತ್ತೆಯಾಗಿದ್ದ ಬೆಂಗಳೂರಿನ ಬಾಲಕಿ ಕೊನೆಗೂ ಪತ್ತೆ! | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸಮನ್ವಿ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಡಿ.ಕೆ ಶಿವಕುಮಾರ್ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#
ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್​ಡಿ ರೇವಣ್ಣ | ಜನತಾ ನ್ಯೂ&#

ನ್ಯೂಸ್ MORE NEWS...