ವೀಕೆಂಡ್ ಕರ್ಪ್ಯೂ, ನೈಟ್ ಕರ್ಪ್ಯೂ: ಕೆಎಸ್ಆರ್ಟಿಸಿ ಬಸ್ ರಾತ್ರಿ ಸಂಚರಿಸುವ ಬಗ್ಗೆ ಪ್ರತ್ಯೇಕ ಮಾರ್ಗಸೂಚಿ ಪ್ರಕಟ | ಜನತಾ ನ್ಯೂಸ್
ಬೆಂಗಳೂರು : ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕಾಗಿ ವಾರಾಂತ್ಯ ಹಾಗೂ ವೀಕೆಂಡ್ ಕರ್ಪ್ಯೂ ಜಾರಿಗೊಳಿಸಿದೆ. ಜನವರಿ 5ರ ರಾತ್ರಿ 10 ಗಂಟೆಯಿಂದ ಜನವರಿ 19ರವರೆಗೆ ನೈಟ್ ಕರ್ಫ್ಯೂ ಇರುವ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರಾತ್ರಿ ವೇಳೆ ಬಸ್ ಸಂಚಾರವಿರುತ್ತದೆ. ಜನದಟ್ಟಣೆ ಗಮನದಲ್ಲಿಟ್ಟುಕೊಂಡು ಅವಶ್ಯಕತೆಗೆ ಅನುಗುಣವಾಗಿ ರಾಜ್ಯದಲ್ಲಿ ಸಾರಿಗೆ ಸಂಸ್ಥೆ ಬಸ್ಗಳನ್ನು ರಸ್ತೆಗಿಳಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ ಅವರು, ಕೋವಿಡ್ ಸೋಂಕಿನ ನಿಯಂತ್ರಣ ಸಂಬಂಧ ರಾಜ್ಯ ಸರ್ಕಾರ ಇಂದಿನಿಂದ ದಿನಾಂಕ 19-01-2022ರವರೆಗೆ ವಾರಾಂತ್ಯ ಹಾಗೂ ನೈಟ್ ಕರ್ಪ್ಯೂ ವಿಸ್ತರಿಸಿದೆ. ಈ ಮಾರ್ಗಸೂಚಿ ಕ್ರಮದ ನಡುವೆಯೂ ಪ್ರಯಾಣಿಕರ ಅನುಕೂಲಕ್ಕಾಗಿ ಸಾರಿಗೆ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ರಾತ್ರಿ ಸೇವೆ ಆನ್ಲೈನ್ ಬುಕಿಂಗ್ ವ್ಯವಸ್ಥೆಗೆ ಒಳಪಡಿಸುವುದು. ಮುಂಗಡ ಟಿಕೆಟ್ ಕಾಯ್ದಿರಿಸುವಿಕೆ ಆಧಾರದಲ್ಲಿ ಬಸ್ ಸಂಚಾರ ಮಾಡಲಾಗುತ್ತದೆ. ಕೇರಳ, ಮಹಾರಾಷ್ಟ್ರ, ಗೋವಾಗೆ ಕರ್ನಾಟಕದಿಂದ ಬಸ್ ಇರುತ್ತೆ. ಕೊರೊನಾ ಲಸಿಕೆ ಪಡೆಯದಿದ್ದರೂ RTPCR ಟೆಸ್ಟ್ ರಿಪೋರ್ಟ್ ಬೇಕು. 72 ಗಂಟೆಯೊಳಗಿನ ನೆಗೆಟಿವ್ ವರದಿ ನೀಡಿ ಪ್ರಯಾಣಿಸಬಹುದು ಎಂದು ಹೇಳಕಾಗಿದೆ. ಸಿಬ್ಬಂದಿ, ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೊವಿಡ್ ನಿಯಮ ಪಾಲಿಸಿ ಸಾರಿಗೆ ಬಸ್ನಲ್ಲಿ ಓಡಾಡಬಹುದು ಎಂದು ತಿಳಿಸಲಾಗಿದೆ.