ಬೆಂಗಳೂರಲ್ಲಿ ಜ.31ರ ವರೆಗೂ 144 ಸೆಕ್ಷನ್ ವಿಸ್ತರಣೆ ಮಾಡಿ ಕಮಲ್ ಪಂತ್ ಆದೇಶ | ಜನತಾ ನ್ಯೂಸ್
ಬೆಂಗಳೂರು : ಜನವರಿ 31ರ ವರೆಗೂ ನಗರದಲ್ಲಿ 144 ಸೆಕ್ಷನ್ ವಿಸ್ತರಣೆ ಮಾಡಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ನೀಡಿದ್ದಾರೆ.
ನಗರದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಹಾಗೂ ಫೆಬ್ರವರಿಯಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ ಗರಿಷ್ಠ ಮಟ್ಟಕ್ಕೆ ತಲುಪುವ ಕುರಿತಂತೆ ತಜ್ಞರು ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ, ಪ್ರತಿಭಟನೆ, ರ್ಯಾಲಿ, ಜನರು ಗುಂಪು ಸೇರುಕೆಯನ್ನು ನಿಷೇಧಿಸಲಾಗಿದೆ. ಜ.6ರಿಂದ 19ರ ವರೆಗೂ ಜಾರಿಯಲ್ಲಿದ್ದ 144 ಸೆಕ್ಷನ್ ಅನ್ನು ತಿಂಗಳಾಂತ್ಯದ ವರೆಗೂ ವಿಸ್ತರಣೆ ಮಾಡಿ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶಿಸಿದ್ದಾರೆ. ಆದೇಶ ಉಲ್ಲಂಘಿಸಿದರೆ ಎನ್ ಡಿಎಂಎ ಆಕ್ಟ್ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
RELATED TOPICS:
English summary :Kamal Pant orders extension of Section 144 in Bangalore