ಹುಲಿ ಚರ್ಮ ಮಾರಾಟಕ್ಕೆ ಯತ್ನ: 4 ಆರೋಪಿಗಳ ಬಂಧನ | ಜನತಾ ನ್ಯೂಸ್
ಮಡಿಕೇರಿ : ಸತ್ತುಬಿದ್ದಿದ್ದ ಹುಲಿಯ ಚರ್ಮ ತಂದು ಒಣಗಿಸಿ ಮಾರಾಟಕ್ಕೆ ಯತ್ನಿಸಿದ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಕೊಡಗಿನ ವಿರಾಜಪೇಟೆಯ ತಟ್ಟಳ್ಳಿಯಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹರೀಶ್, ರಮೇಶ್, ಮನು ಹಾಗೂ ರಾಜೇಶ್ ಎಂದು ಗುರುತಿಸಲಾಗಿದ್ದು, ಸತ್ತುಬಿದ್ದಿದ್ದ ಹುಲಿಯ ಚರ್ಮ ತಂದು ಒಣಗಿಸಿ, ಉಗುರು ಹಾಗೂ ಪಾದಗಳನ್ನು ಕತ್ತರಿಸಿ ಮಾರಾಟ ಮಾಡಲು ಯತ್ನಿಸಿದ್ದರು ಎನ್ನಲಾಗಿದೆ. ಬಂಧಿತರಿಂದ ಹುಲಿಯ ಚರ್ಮ, 7 ಉಗುರು, 2 ಕಾಲನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
English summary :Madikeri