ಕಬ್ಬು ಕಿತ್ತುಕೊಳ್ಳಲು ಹೋಗಿ ಪ್ರಾಣ ಕಳ್ಕೊಂಡ ಬಾಲಕ | ಜನತಾ ನ್ಯೂಸ್

ಬೆಳಗಾವಿ : ಕಬ್ಬು ಕಿತ್ತುಕೊಳ್ಳಲು ಹೋಗಿದ್ದ 8 ವರ್ಷದ ಬಾಲಕನೊಬ್ಬನ ಮೇಲೆ ಟ್ರ್ಯಾಕ್ಟರ್ ಹರಿದ ಪರಿಣಾಮ ಬಾಲಕ ರಸ್ತೆಯಲ್ಲಿಯೇ ಬಿದ್ದು ಪ್ರ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ.
ಅನಿಲ್ ಹಣಬರ್ ಎಂಬಾತ ಸಾವಿಗೀಡಾಗಿದ್ದಾನೆ. ಬೈಲಹೊಂಗಲ ತಾಲೂಕಿನ ಅಮಟೂರ ಗ್ರಾಮದಲ್ಲಿ ಕಬ್ಬು ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ನಲ್ಲಿನ ಕಬ್ಬು ಕಿತ್ತುಕೊಳ್ಳಲು ಹೋಗಿದ್ದ ಬಾಲಕ ಆಯತಪ್ಪಿ ಟ್ರ್ಯಾಕ್ಟರ್ನ ಚಕ್ರಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಾಲಕನ ಸೊಂಟದ ಭಾಗದ ಮೇಲೆ ಚಕ್ರ ಹಾದು ಹೋಗಿದ್ದು ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ.
English summary :Accident in Belagavi