ಅಜ್ಜಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಮೊಮ್ಮಗಳು | ಜನತಾ ನ್ಯೂಸ್
ಬೆಂಗಳೂರು : ಮೊಮ್ಮಗಳು ಅಜ್ಜಿಯನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
72 ವರ್ಷದ ಅಜ್ಜಿಯ ಶವ ಹಾಲ್ನಲ್ಲಿ ಪತ್ತೆಯಾಗಿದ್ದು, ಬಾಯಲ್ಲಿ ರಕ್ತಸ್ರಾವ ಉಂಟಾಗಿದೆ. ಗೋಡೆಯ ಮೇಲೆ ರಕ್ತದ ಕಲೆಗಳು ಪತ್ತೆಯಾಗಿವೆ. ಇನ್ನು ಆಕೆಯ 27 ವರ್ಷದ ಮೊಮ್ಮಗಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದೆ.
ಇತ್ತೀಚಿಗೆ ಮೊಮ್ಮಗಳ ಮೂರು ತಿಂಗಳ ಮಗು ಸಾವಿಗೀಡಾಗಿತ್ತು. ಇದರಿಂದ ಮೊಮ್ಮಗಳು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ಆದ್ದರಿಂದ ಮೊಮ್ಮಗಳು ಸಣ್ಣಪುಟ್ಟ ವಿಚಾರಕ್ಕೆ ಗಲಾಟೆ ಮಾಡುತಿದ್ದಳು ಎನ್ನಲಾಗಿದೆ..
ನಿನ್ನೆ ಕೂಡ ಅಜ್ಜಿ ಜೊತೆ ಜಗಳ ಮಾಡಿದ್ದ ಮೊಮ್ಮಗಳು, ಕೋಪದಲ್ಲಿ ಅಜ್ಜಿಯನ್ನ ನೂಕಿದ್ದಾಳೆ. ಇದ್ರಿಂದ ಅಜ್ಜಿಯ ತಲೆಗೆ ಪೆಟ್ಟಾಗಿ, ಅವರು ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಭಯಗೊಂಡ ಮೊಮ್ಮಗಳು, ಬಳಿಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಾವಿಗೀಡಾಗಿರುವ ಯುವತಿಯ ಪತಿ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಜಾನ್ಞಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.