ಉಕ್ರೇನ್‍ನಲ್ಲಿ ಹಾವೇರಿ ವಿದ್ಯಾರ್ಥಿ ಸಾವು: ಕರೆ ಮಾಡಿ ಸಾಂತ್ವನ ಹೇಳಿದ ಸಿಎಂ | ಜನತಾ ನ್ಯೂಸ್

01 Mar 2022
690

ಹಾವೇರಿ : ಉಕ್ರೇನ್‌ನ ಖಾರ್ಕಿವ್ ನಲ್ಲಿ ರಷ್ಯಾದ ಪಡೆ ನಡೆಸಿದ ದಾಳಿಯಲ್ಲಿ ಹಾವೇರಿ ಜಿಲ್ಲೆಯ ಕರ್ನಾಟಕದ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಇಂದು ಬೆಳಗ್ಗೆ ಫೋನ್​ನಲ್ಲಿ ಮಾತನಾಡಿದ ನವೀನ ಮತ್ತೆ ಫೋನ್​ ಎತ್ತಿಲ್ಲ. ಎಂಬಿಬಿಎಸ್​ ಕಲಿತು ಬರುತ್ತೇನೆ ಎಂದು ಹೇಳಿ ಹೋಗಿದ್ದೆಲ್ಲೋ ಎಂದು ಮೃತನ ತಾಯಿ ವಿಜಯಲಕ್ಷ್ಮಮ್ಮ ಹಾಗೂ ಸಂಬಂಧಿಕರು ಗೋಳಾಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಸಿಎಂ ಬಸವರಾಜ ಬೊಮ್ಮಾಯಿ ಆವರು ನವೀನ್ ಅವರ ತಂದೆ ಶೇಖರಗೌಡ ಅವರಿಗೆ ಕರೆ ಮಾಡಿ ಸಂತಾಪ ಸೂಚಿಸಿದ್ದಾರೆ. ದೂರವಾಣಿಯಲ್ಲಿ ಮಾತನಾಡಿ ಸಾವನ್ನಪ್ಪಿದ ನವೀನ್ ಬಗ್ಗೆ ಮಾಹಿತಿ ಪಡೆದ ಸಿಎಂ, ಇದು ನಿಜಕ್ಕೂ ದೊಡ್ಡ ದುರಂತ, ದೇವರು ನವೀನ್ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲಿ. ನಿಮ್ಮ ಕುಟುಂಬ ಧೈರ್ಯದಿಂದ ಇರಬೇಕು, ಎಂದು ಸಾಂತ್ವಾನ ಹೇಳಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಅವರ ಕುಟುಂಬ ನನಗೆ ಗೊತ್ತು. ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ಪ್ರಧಾನಿ ಮೋದಿ ಕೂಡ ಕುಟುಂಬದವರೊಂದಿಗೆ ಮಾತನಾಡಿದ್ದರು. ಮೃತದೇಹವನ್ನು ಮರಳಿ ಭಾರತಕ್ಕೆ ತರಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮೃತದೇಹವನ್ನು ಪಡೆದುಕೊಳ್ಳಲು ಸಹಾಯ ಮಾಡುವಂತೆ ನಾನು ಪ್ರಧಾನಿ ಕಾರ್ಯಾಲಯ ಮತ್ತು ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದೇನೆ, ಎಂದು ತಿಳಿಸಿದ್ದಾರೆ.

ನವೀನನ ತಂದೆಗೆ ಮಾಜಿ ಸಿಎಂ ಯಡಿಯೂರಪ್ಪ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ನೀವು ಧೈರ್ಯವಾಗಿರಿ. ನಾವು ಯಾರೂ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನೀವೇ ಧೈರ್ಯ ಕಳಕೊಂಡ್ರೆ ಕುಟುಂಬದ ಸ್ಥಿತಿ ಹೇಗೆ? ಎಂದು ಯಡಿಯೂರಪ್ಪ ಸಂತೈಸಿದರು.

RELATED TOPICS:
English summary :Karnataka Student death in Ukraine : I know his family. They are very close to me - CM Bommai

ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ನ್ಯೂಸ್ MORE NEWS...