ದಾವೂದ್ ಇಬ್ರಾಹಿಂ ಗೆ ಸಮರ್ಪಿತ, ದಾವೂದ್ ಶರಣದಲ್ಲಿದೆ ಮಹಾರಾಷ್ಟ್ರ ಸರ್ಕಾರ - ವಿರೋಧ ಪಕ್ಷದ ನಾಯಕ ಫಡ್ನವಿಸ್ | ಜನತಾ ನ್ಯೂಸ್

03 Mar 2022
583

ಮುಂಬೈ : ಮಹಾರಾಷ್ಟ್ರ ಸರ್ಕಾರವು ದಾವೂದ್ ಇಬ್ರಾಹಿಂ ಗೆ ಸಮರ್ಪಿತ, ದಾವೂದ್ ಗೆ ಶರಣಾಗಿದೆ, ಎಂದು ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದಲ್ಲಿರುವ ಕಾಂಗ್ರೆಸ್, ಎನ್‌ಸಿಪಿ ಹಾಗೂ ಶಿವಸೇನೆ ಮೈತ್ರಿಯ ಮಹಾ ಆಘಾಡಿ ಸರ್ಕಾರದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ಮೊದಲ ಬಾರಿಗೆ ಸಚಿವ(ನವಾಬ್ ಮಲಿಕ್)ರೊಬ್ಬರು ಕಂಬಿ ಹಿಂದೆ ಬಿದ್ದಿದ್ದರೂ, ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲಾಗಿಲ್ಲ. ಇದು ನಂಬಲು ಅಸಾದ್ಯ. ಅವರು ಸಣ್ಣ ವಿಷಯಕ್ಕೆ ಜೈಲು ಪಾಲಾಗಿಲ್ಲ, ದಾವೂದ್ ಇಬ್ರಾಹಿಂ ಕುಟುಂಬದೊಂದಿಗೆ ವ್ಯವಹರಿಸಿದ ಆರೋಪ ಅವರ ಮೇಲಿದೆ, ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅಸಮಧಾನವನ್ನು ಹೊರಹಾಕಿದ್ದಾರೆ.

ಅವರ ರಾಜೀನಾಮೆಯನ್ನು ತೆಗೆದುಕೊಳ್ಳಲು ಸರ್ಕಾರ ಏಕೆ ಬಯಸುವುದಿಲ್ಲ? ಇದು "ದಾವೂದ್ ಸಮರ್ಪಿತ", "ದಾವೂದ್ ಶರಣ್" ಸರ್ಕಾರ. ದಾವೂದ್ ಜೊತೆ ಸಂಬಂಧ ಇಟ್ಟುಕೊಂಡಿರುವ ಜನರನ್ನು ಉಳಿಸಲು ಈ ಸರ್ಕಾರ ಒಗ್ಗೂಡುತ್ತಿದೆ. ಅದಕ್ಕಾಗಿಯೇ ನಾವು ಪ್ರತಿಭಟನೆಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಅವರ ರಾಜೀನಾಮೆಯನ್ನು ತಕ್ಷಣವೇ ತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ, ಎಂದು ದೇವೇಂದ್ರ ಫಡ್ನವಿಸ್ ಆರೋಪಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನಕ್ಕೆ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚಿಸಲು ಎಲ್ಲಾ ಬಿಜೆಪಿ ಶಾಸಕರು ಇಂದು ಸಭೆ ಸೇರಲಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ವಿವಾದಾತ್ಮಕ ಹೇಳಿಕೆಗಳ ನೀಡಿದ್ದಾರೆಂದು ರಾಜ್ಯಪಾಲರ ವಿರುದ್ಧ ಪ್ರತಿಭಟಿಸಿ ಘಟನೆಗಳು ಇಂದು ವಿಧಾನಸಭೆ ಆವರಣದಲ್ಲಿ ನಡೆದಿರುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಲಿದೆ, ಎಂದು ಬಳಿಕ ಫಡ್ನವಿಸ್ ಅವರು ಎಏನ್ಐ ತಿಳಿಸಿದ್ದಾರೆ.

RELATED TOPICS:
English summary :Maharashtra government dedicated to Dawood, surrendered to Dawood - Opposition leader Fadnavis

ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ನ್ಯೂಸ್ MORE NEWS...