ಹರ್ಷ ಮನೆಗೆ ಬಿಎಸ್ವೈ ಭೇಟಿ: 25 ಲಕ್ಷ ರೂ. ಪರಿಹಾರ ವಿತರಣೆ! | ಜನತಾ ನ್ಯೂಸ್
ಶಿವಮೊಗ್ಗ : ಶಿವಮೊಗ್ಗದಲ್ಲಿ ಹತ್ಯೆಗೀಡಾದ ಬಜರಂಗದಳದ ಕಾರ್ಯಕರ್ತ ಹರ್ಷ ಮನೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭೇಟಿ ನೀಡಿದ್ದಾರೆ.
ಹರ್ಷ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಿಎಸ್ವೈ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸರ್ಕಾರದ ವತಿಯಿಂದ ಘೋಷಿಸಲಾಗಿದ್ದ 25 ಲಕ್ಷ ರೂ. ಪರಿಹಾರದ ಚೆಕ್ ಅನ್ನು ಹರ್ಷ ಕುಟುಂಬಸ್ಥರಿಗೆ ಬಿಎಸ್ ವೈ ಹಸ್ತಾಂತರ ಮಾಡಿದರು.
ಸೀಗೆಹಟ್ಟಿಯಲ್ಲಿ ಹರ್ಷ ಕುಟುಂಬಸ್ಥರ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, 26 ವರ್ಷದ ಯುವಕ ಹರ್ಷ ಎಲ್ಲರ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ. ಈ ಭಾಗದಲ್ಲಿ ಗೊಂದಲ, ಹೋರಾಟಕ್ಕೆ ಅವಕಾಶ ನೀಡುತ್ತಾ ಇರಲಿಲ್ಲ. ಹಿಂದೂ ಯುವ ಮುಖಂಡನಾಗಿ ಹರ್ಷ ಬೆಳೆಯುತ್ತಿದ್ದ. ಹರ್ಷರನ್ನು ಕೊಲೆ ಮಾಡಿರುವುದು ದುಃಖದ ವಿಷಯವೆಂದು ಬೇಸರ ವ್ಯಕ್ತಪಡಿಸಿದರು. ಹರ್ಷನ ಕುಟುಂಬಕ್ಕೆ ದೇವರು ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.