ಸಕ್ಕರೆನಾಡಿನಲ್ಲಿ ಮತ್ತೆ ಸದ್ದು ಮಾಡಿದ ನಂಗಾನಾಚ್​! | ಜನತಾ ನ್ಯೂಸ್

09 Mar 2022
506

ಮಂಡ್ಯ : ಮಂಡ್ಯದಲ್ಲಿ ಊರ ಜಾತ್ರೆಯಲ್ಲಿ ಆಯೋಜಿಸಿದ್ದಂತ ಅಶ್ಲೀಲ ನೃತ್ಯದ ಸಂದರ್ಭದಲ್ಲಿಯೇ, ಬಾಲಕನೊಬ್ಬನನ್ನು ವೇದಿಕೆಗೆ ಕರೆದುಕೊಂಡು, ಅಸಭ್ಯವಾಗಿ ಯುವತಿಯರು ವರ್ತಿಸಿರೋ ವೀಡಿಯೋ ವೈರಲ್ ಆಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ತೊಳಸಿ ಕೊಬ್ರಿ ಗೇಟ್ ಗ್ರಾಮದಲ್ಲಿ ಗ್ರಾಮ ದೇವತೆಯ ಹಬ್ಬಕ್ಕೆ ಬೇರೆಡೆಯಿಂದ ಹುಡುಗಿಯರನ್ನು ಕರೆಸಿ ಆರ್ಕೇಸ್ಟ್ರಾ ಆಯೋಜಿಸಿ ಯುವಕರಿಗೆ ಮೋಜು-ಮಸ್ತಿಯ ವ್ಯವಸ್ಥೆ ಮಾಡಲಾಗಿದೆ.

ಇದೇ ಸಂದರ್ಭದಲ್ಲಿ ಚಿಕ್ಕ ಬಾಲಕನೊಬ್ಬ ಮಾದಕ ಹುಡುಗಿಯರ ಕೈಗೆ ಸಿಲುಕಿ ಹೈರಾಣಾದ ಘಟನೆಯೂ ನಡೆದಿದೆ. ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಶಾಲನ್ನೇ ಕಟ್ಟಿಕೊಂಡು ಡ್ಯಾನ್ಸ್​ ಮಾಡಿದರು. ಇಬ್ಬರು ರಾಜಕಾರಣಿಗಳು ವೇದಿಕೆಗೆ ಬಂದು ಹೋದ ಬಳಿಕ ಮಾದಕ ನೃತ್ಯ ಶುರುವಾಯಿತು. ವಿಶ್ವ ಮಹಿಳಾ ದಿನಾಚರಣೆ ದಿನವೇ ಪಡ್ಡೆ ಹುಡುಗಿಯರನ್ನು‌ ಕರೆಸಿ ಮಧ್ಯರಾತ್ರಿ ವರೆಗೂ ಮಾದಕ‌ ನೃತ್ಯ ಕಾರ್ಯಕ್ರಮ ನಡೆಸಿದ್ದರಿಂದ ಸಾರ್ವಜನಿಕ ವಲಯದಲ್ಲಿ ಬಹಳಷ್ಟು ಟೀಕೆ ಕೇಳಿ ಬರುತ್ತಿವೆ.

ರಾಜಕಾರಣಿಗಳಾದ ಚಲುವರಾಯಸ್ವಾಮಿ ಮತ್ತು ಸುರೇಶ್ ಗೌಡ ಬೆಂಬಲಿಗರು ಗ್ರಾಮದಲ್ಲಿ ಪ್ರತ್ಯೇಕವಾಗಿ ಆರ್ಕೇಸ್ಟ್ರಾ ಆಯೋಜಿಸಿದ್ದರೆಂದು ತಿಳಿದುಬಂದಿದೆ.

ಇದೀಗ ಈ ವೀಡಿಯೋ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾಗಮಂಗಲದಲ್ಲಿ ಪಡ್ಡೆ ಹುಡುಗರ ಓಲೈಕೆಗೆ ರಾಜಕಾರಣಿಗಳು ಮುಂದಾಗುತ್ತಿದ್ದಾರೆ ಎನ್ನಲಾಗುತ್ತಿದೆ.

RELATED TOPICS:
English summary :Nanganach Dance in Mandya

ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ನ್ಯೂಸ್ MORE NEWS...