ಮಹಾರಾಷ್ಟ್ರ ಪೊಲೀಸರು ಕೇಂದ್ರದ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಬಂಧಿಸಲಿದ್ದಾರೆ - ಶಿವಸೇನೆ ನಾಯಕ ಸಂಜಯ್ ರಾವತ್ | ಜನತಾ ನ್ಯೂಸ್

ಮುಂಬೈ : ಮಹಾರಾಷ್ಟ್ರ ರಾಜ್ಯ ಪೊಲೀಸರು ಕೇಂದ್ರದ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಬಂಧಿಸಲಿದ್ದಾರೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ. ರಾಜ್ಯದ ಸಮ್ಮಿಶ್ರ ಸರ್ಕಾರದ ಸಚಿವರುಗಳು ಅದರಲ್ಲೂ ಎನ್‌ಸಿಪಿ ನಾಯಕರು ಒಂದೊಂದು ಬಾರಿ ಬೇರೆ ಬೇರೆ ಆರೋಪಗಳಲ್ಲಿ ಬಂಧನಕ್ಕೊಳಗಾಗಿದ್ದ ನಂತರ ಈ ಹೇಳಿಕೆ ಬಂದಿದೆ.
ಇಡಿ ಅಧಿಕಾರಿಗಳ ಸಂಬಂಧ ಹೊಂದಿರುವ ಕ್ರಿಮಿನಲ್ ಸಿಂಡಿಕೇಟ್ ಮತ್ತು ಸುಲಿಗೆ ದಂಧೆಯ ತನಿಖೆಯನ್ನು ಮುಂಬೈ ಪೊಲೀಸರು ಪ್ರಾರಂಭಿಸುತ್ತಾರೆ. ನನ್ನ ಮಾತುಗಳನ್ನು ಬರೆದಿಟ್ಟುಕೊಳ್ಳಿ, ಈ ಕೆಲವು ಇಡಿ ಅಧಿಕಾರಿಗಳು ಜೈಲಿಗೆ ಹೋಗುತ್ತಾರೆ, ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ. ಅವರು ಈ ಕುರಿತು ಸುದ್ಧಿ ಸಂಸ್ಥೆ ಎಏನ್ಐ ನೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಯಾರ ಮೇಲೂ ಸುಳ್ಳು ಪ್ರಕರಣಗಳನ್ನು ದಾಖಲಿಸಿಲ್ಲ. ಎನ್‌ಸಿಬಿ(ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ), ಸಿಬಿಐ(ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್) ಮತ್ತು ಇಡಿ(ಜಾರಿ ನಿರ್ದೇಶನಾಲಯ) ನಂತಹ ರಾಷ್ಟ್ರೀಯ ಏಜೆನ್ಸಿಗಳು ಬಿಜೆಪಿಯಿಂದ ತರಬೇತಿ ಪಡೆಯುತ್ತವೆ ಮತ್ತು ಸುಳ್ಳು ಪ್ರಕರಣಗಳನ್ನು ಸೃಷ್ಟಿಸುತ್ತವೆ, ಮಹಾರಾಷ್ಟ್ರ ಪೋಲೀಸರು ಅಲ್ಲ. ಫಡ್ನವೀಸ್ ತಾಳ್ಮೆಯಿಂದಿರಬೇಕು, ಅವರ ಸಂವೇದನಾಶೀಲ ಹೇಳಿಕೆಗಳು ರಾಜ್ಯ ಪೊಲೀಸರನ್ನು ಕೆಣಕುತ್ತಿವೆ, ಎಂದು ಸಂಜಯ್ ರಾವತ್ ಹೇಳಿದರು.