ಉಕ್ರೇನ್ ನಲ್ಲಿನ ಅಮೇರಿಕ ಅನುದಾನಿತ ಬಯೋಲಾಬ್‌ಗಳಿಂದ ಹೊಸ ಮಾರಕ ವೈರಾಣು ವಿಶ್ವಾದ್ಯಂತ ಹರಡುವ ಸಾಧ್ಯತೆ - ಗಬ್ಬಾರ್ಡ್ | ಜನತಾ ನ್ಯೂಸ್

15 Mar 2022
409

ವಾಷಿಂಗ್ಟನ್ : ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ, ಉಕ್ರೇನ್‌ನಲ್ಲಿರುವ 25-30 ಅಮೇರಿಕಾ(ಯುಎಸ್) ಅನುದಾನಿತ ಬಯೋಲಾಬ್‌ಗಳಿಂದ ಕೋವಿಡ್19 ಗೆ ಹೋಲುವ ಅಪಾಯಕಾರಿ ರೋಗಕಾರಕಗಳ ಸೋರಿಕೆ ಮತ್ತು ಹರಡುವ ಸಾಧ್ಯತೆಗಳಿವೆ. ಇದು ಯುಎಸ್ ಮತ್ತು ಇತರ ಪ್ರಪಂಚದ ಮೇಲೆ ಕೆಟ್ಟ ಪರಿಣಾಮ ಬೀರಬಹುದು, ಎಂದು ಯುಎಸ್ ಅಧ್ಯಕ್ಷೀಯ 2020 ಅಭ್ಯರ್ಥಿ ಮತ್ತು ಯುಎಸ್ ಮಾಜಿ ಕಾಂಗ್ರೆಸ್ ಮಹಿಳೆ ತುಳಸಿ ಗಬ್ಬಾರ್ಡ್ ಹೇಳುತ್ತಾರೆ.

ಈ ಅಪಾಯಕಾರಿ ರೋಗಕಾರಕಗಳ "ಅಚಾತುರ್ಯ ಅಥವಾ ಉದ್ದೇಶಪೂರ್ವಕ" ಉಲ್ಲಂಘನೆಯ ಬಗ್ಗೆ ಗಬ್ಬಾರ್ಡ್ ಕಳವಳ ವ್ಯಕ್ತಪಡಿಸಿದ್ದಾರೆ, ಗಬ್ಬಾರ್ಡ್ ಉಕ್ರೇನ್‌ನಲ್ಲಿರುವ ಈ ಯುಎಸ್-ನಿಧಿಯ ಪ್ರಯೋಗಾಲಯಗಳ ಸುತ್ತ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದರು.

ತುಳಸಿ ಗಬ್ಬಾರ್ಡ್ ಅವರು ಎರಡು ನಿಮಿಷಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಉಕ್ರೇನ್‌ನಲ್ಲಿ 25 ರಿಂದ 30 ಅಮೇರಿಕ ಅನುದಾನಿತ ಜೈವಿಕ ಪ್ರಯೋಗಾಲಯಗಳಿವೆ ಮತ್ತು ಅಪಾಯಕಾರಿ ರೋಗಕಾರಕಗಳನ್ನು ಹರಡಬಹುದು, ಎಂದು ಹೇಳಿದ್ದು, ಪ್ರಯೋಗಾಲಯಗಳ ಪ್ರದೇಶಗಳಲ್ಲಿ ತಕ್ಷಣದ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.

"ಇಲ್ಲಿ ಅಲ್ಲಗಳೆಯಲಾಗದ ಸತ್ಯವಿದೆ. ಯುಎಸ್ ಸರ್ಕಾರದ ಪ್ರಕಾರ ಉಕ್ರೇನ್‌ನಲ್ಲಿ 25 ರಿಂದ 30 ಅಮೇರಿಕ ಅನುದಾನಿತ ಜೈವಿಕ-ಪ್ರಯೋಗಾಲಯ(ಬಯೋಲಾಬ್‌)ಗಳಿವೆ. ಈ ಬಯೋಲಾಬ್‌ಗಳು ಅಪಾಯಕಾರಿ ರೋಗಕಾರಕಗಳ ಮೇಲೆ ಸಂಶೋಧನೆ ನಡೆಸುತ್ತಿದೆ. ಈಗ ಉಕ್ರೇನ್ ವ್ಯಾಪಕವಾದ ಬಾಂಬ್ ದಾಳಿ, ಫಿರಂಗಿ ಮತ್ತು ಶೆಲ್ ದಾಳಿ ಎದುರಿಸುತ್ತಿದೆ. ಮತ್ತು ಈ ಸೌಲಭ್ಯಗಳನ್ನು ಹೊಂದಿರುವ ಸಕ್ರಿಯ ಯುದ್ಧ ವಲಯವು ಎಂತಹ ಉತ್ತಮ ಸಂದರ್ಭಗಳಲ್ಲೂ ಸಹ ಸುಲಭವಾಗಿ ರಾಜಿ ಮಾಡಿಕೊಳ್ಳಬಹುದು ಮತ್ತು ಈ ಮಾರಣಾಂತಿಕ ರೋಗಕಾರಕಗಳನ್ನು ಬಿಡುಗಡೆ ಮಾಡಬಹುದು".

ಕೋವಿಡ್‌ನಂತೆ ಈ ರೋಗಕಾರಕಗಳಿಗೆ ಯಾವುದೇ ಗಡಿಗಳಿಲ್ಲ, ಎಂದು ಅವರು ಎಚ್ಚರಿಸಿದ ಅವರು, "ಅಜಾಗರೂಕತೆಯಿಂದ ಅಥವಾ ಉದ್ದೇಶಪೂರ್ವಕವಾಗಿ ಏನಾದರೂ ಉಲ್ಲಂಘಿಸಿದರೆ(ಗಡಿ) ಅಥವಾ ರಾಜಿ ಮಾಡಿಕೊಂಡರೆ ಅವು(ವೈರಾಣು) ಶೀಘ್ರವಾಗಿ ಯುರೋಪ್, ಯುನೈಟೆಡ್ ಸ್ಟೇಟ್ಸ್ ಮತ್ತು ಪ್ರಪಂಚದಾದ್ಯಂತ ಹರಡಿ ಹೇಳಲಾಗದ ನೋವು ಮತ್ತು ಸಾವನ್ನು ಉಂಟುಮಾಡಲಿದೆ. ಆದ್ದರಿಂದ ಅಮೆರಿಕಾದ ಜನರು, ಯುರೋಪಿನ ಜನರು, ಪ್ರಪಂಚದಾದ್ಯಂತದ ಜನರನ್ನು ರಕ್ಷಿಸಲು, ಈ ಪ್ರಯೋಗಾಲಯಗಳನ್ನು ತಕ್ಷಣವೇ ಸ್ಥಗಿತ ಮಾಡಬೇಕಾಗಿದೆ ಮತ್ತು ಅವರು ಹೊಂದಿರುವ ರೋಗಕಾರಕಗಳನ್ನು ನಾಶಪಡಿಸಬೇಕಾಗಿದೆ".

"ಈ ವಿಷಯಗಳನ್ನು ಮುಚ್ಚಿಡಲು ಪ್ರಯತ್ನಿಸುವ ಬದಲು, ಬಿಡೆನ್-ಹ್ಯಾರಿಸ್ ಆಡಳಿತವು ರಷ್ಯಾ, ಉಕ್ರೇನ್, ನ್ಯಾಟೋ ಮತ್ತು ಯುಎನ್‌ನೊಂದಿಗೆ ಪ್ರಯೋಗಾಲಯಗಳ ಸುತ್ತಮುತ್ತಲಿನ ಎಲ್ಲಾ ಮಿಲಿಟರಿ ಕ್ರಮಗಳಿಗೆ ತಕ್ಷಣದ ಕದನ ವಿರಾಮವನ್ನು ಜಾರಿಗೆ ತರಲು ಮತ್ತು ಅದನ್ನು ಸುರಕ್ಷಿತಗೊಳಿಸುವವರೆಗೆ ಮತ್ತು ಈ ರೋಗಕಾರಕಗಳು ನಾಶವಾಗುವವರೆಗೆ ಕೆಲಸ ಮಾಡಬೇಕಾಗುತ್ತದೆ. ”ಎಂದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಮಾಜಿ ಮಹಿಳಾ ಸದಸ್ಯೆ ಹೇಳಿದ್ದಾರೆ.

ಕೋವಿಡ್-19 ಹುಟ್ಟಿಕೊಂಡಿರುವ ಚೀನಾದ ವುಹಾನ್‌ನಲ್ಲಿರುವ ಪ್ರಯೋಗಾಲಯದಂತೆಯೇ, ಯುನೈಟೆಡ್ ಸ್ಟೇಟ್ಸ್ ಪ್ರಪಂಚದಾದ್ಯಂತ 300 ಅಥವಾ ಅದಕ್ಕಿಂತ ಹೆಚ್ಚು ಅಪಾಯಕಾರಿ ಸಂಶೋಧನಾ ಪ್ರಯೋಗಾಲಯಗಳನ್ನು ಹೊಂದಿದೆ, ಎಂದು ಅವರು ಆಘಾತಕಾರಿ ವಿಷಯ ಹೇಳಿದ್ದಾರೆ.

"ಈ ಪ್ರಯೋಗಾಲಯಗಳು ಎಷ್ಟು ಅಪಾಯಕಾರಿ ಮತ್ತು ದುರ್ಬಲವಾಗಿವೆ(ರಕ್ಷಣೆಯಲ್ಲಿ) ಎಂಬುದನ್ನು ಈಗ ಅರಿತುಕೊಂಡ ನಂತರ, ಅವುಗಳನ್ನು ಎರಡು ವರ್ಷಗಳ ಹಿಂದೆ ಮುಚ್ಚಬೇಕಾಗಿತ್ತು, ಆದರೆ ಅವುಗಳು ಮುಚ್ಚಿಲ್ಲ" ಎಂದು ಅವರು ಹೇಳಿದ್ದು, ಇದು ರಾಜಕೀಯವಾಗಿ ಪಕ್ಷಪಾತದ ವಿಷಯವಲ್ಲ, ಎಂದು ಸ್ಪಷ್ಟಪಡಿಸಿದ್ದಾರೆ.

RELATED TOPICS:
English summary : New deadly virus likely to spread worldwide from US-funded biolabs in Ukraine - Gabbard

ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ನ್ಯೂಸ್ MORE NEWS...