ಬಾಂಗ್ಲಾದೇಶದ ಹಿಂದೂ ದೇವಸ್ಥಾನದ ಮೇಲೆ 200 ಜನರ ಗುಂಪಿಂದ ದಾಳಿ : ದೇವಾಲಯ ದ್ವಂಸ 3ಗಾಯ | JANATA NEWS

ಡಾಕಾ : ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಾಲಯವನ್ನು ನಿನ್ನೆ ಇಸ್ಲಾಮಿಕ್ ಮೂಲಭೂತವಾದಿಗಳ ಗುಂಪು ಧ್ವಂಸಗೊಳಿಸಿದ್ದು, ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ.
ಬಾಂಗ್ಲಾದೇಶದ ಢಾಕಾದಲ್ಲಿರುವ ಇಸ್ಕಾನ್ ರಾಧಾಕಾಂತ ದೇವಸ್ಥಾನದ ಮೇಲೆ ದಾಳಿ ನಡೆದ ಕುರಿತು ಮಾತನಾಡಿದ ಕೋಲ್ಕತ್ತಾದ ಇಸ್ಕಾನ್ ಉಪಾಧ್ಯಕ್ಷ ರಾಧರಮನ್ ದಾಸ್ ಅವರು, ಕಳೆದ ಸಂಜೆ ಗುರುವಾರ ಭಕ್ತರು ಬುದ್ಧ ಪೂರ್ಣಿಮಾ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದಾಗ, 200 ಜನರ ಗುಂಪೊಂದು ಢಾಕಾದ ಶ್ರೀ ರಾಧಾಕಾಂತ ದೇವಾಲಯದ ಆವರಣಕ್ಕೆ ನುಗ್ಗಿ ಅವರ ಮೇಲೆ ದಾಳಿ ನಡೆಸಿತು. ದಾಳಿಯಿಂದ ಭಕ್ತರಲ್ಲಿ 3 ಮಂದಿ ಗಾಯಗೊಂಡರು. ಅದೃಷ್ಟವಶಾತ್, ಅವರು ಪೊಲೀಸರಿಗೆ ಕರೆ ಮಾಡಿದರು ಮತ್ತು ದುಷ್ಕರ್ಮಿಗಳನ್ನು ಓಡಿಸಲು ಸಾಧ್ಯವಾಯಿತು, ಎಂದು ಸುದ್ದಿ ಮಾಧ್ಯಮ ಎಏನ್ಐಯೊಂದಿಗೆ ಮಾತನಾಡುತ್ತಾ ಹೇಳಿದರು.
ಈ ದಾಳಿಗಳು ತೀವ್ರ ಕಳವಳಕಾರಿ ವಿಷಯವಾಗಿದೆ. ನಾವು ಬಾಂಗ್ಲಾದೇಶ ಸರ್ಕಾರವು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳುವಂತೆ ಮತ್ತು ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರಿಗೆ ಭದ್ರತೆಯನ್ನು ಒದಗಿಸುವಂತೆ ವಿನಂತಿಸುತ್ತೇವೆ, ಎಂದು ರಾಧರಮನ್ ದಾಸ್ ಹೇಳಿದ್ದಾರೆ.
ವರದಿಗಳ ಪ್ರಕಾರ, ದಾಳಿಯ ಕುರಿತು ಭಾರತದ ಹೈಕಮಿಷನ್ ಬಾಂಗ್ಲಾದೇಶದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.