ಓವೈಸಿ ನೇತೃತ್ವದ ಎಐಎಂಐಎಂ ಜೊತೆ ಶಿವಸೇನೆ ಮೈತ್ರಿ - ದೇವೇಂದ್ರ ಫಡ್ನವಿಸ್ ಹೊಸ ಸಿಡಿಸಿದ ಬಾಂಬ್ | JANATA NEWS

19 Mar 2022
429

ಮುಂಬೈ : ಮಹಾರಾಷ್ಟ್ರದ ಮಾಜಿ ಸಿಎಂ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಅಸಾದುದ್ದೀನ್ ಓವೈಸಿ ನೇತೃತ್ವದ ಎಐಎಂಐಎಂ ಜೊತೆ ಶಿವಸೇನೆ ಮೈತ್ರಿ ಮಾಡಿಕೊಳ್ಳುವ ಕುರಿತು ಹೊಸ ಸಂಚಲನಕಾರಿ ಮಾಹಿತಿಯನ್ನು ಎತ್ತಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವಿಸ್ ಅವರು, ಎಐಎಂಐಎಂ ಜೊತೆ ಶಿವಸೇನೆ ಮೈತ್ರಿ ಮಾಡಿಕೊಳ್ಳುವುದು ನಮಗೆ ಅಷ್ಟೇನೂ ಮುಖ್ಯವಲ್ಲ. ಪ್ರಧಾನಿ ಮೋದಿ ಮತ್ತು ನಾವು ಮಾಡುವ ಕೆಲಸದಿಂದಾಗಿ ಜನರು ನಮಗೆ ಮತ ಹಾಕುತ್ತಾರೆ. ಈ ಎಲ್ಲಾ ರಾಜಕೀಯ ಪಕ್ಷಗಳು ಒಂದೇ, ಎಲ್ಲರೂ ಒಗ್ಗೂಡಿದರೂ ಅದು ಯಾವುದೇ ವ್ಯತ್ಯಾಸವನ್ನು ಸೃಷ್ಟಿಸುವುದಿಲ್ಲ, ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಶಿವಸೇನೆ ನಾಯಕ ಸಂಜಯ್ ರಾವುತ್ ಅವರು, ಇಮ್ತಿಯಾಜ್ ಜಲೀಲ್ ಎಐಎಂಐಎಂ ಸಂಸದರಾಗಿದ್ದಾರೆ. ನಾನು ಅವರನ್ನು ಭೇಟಿಯಾಗುತ್ತಲೇ ಇರುತ್ತೇನೆ. ಹಾಗೆಂದ ಮಾತ್ರಕ್ಕೆ, ನಾವು ಅವರೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದಲ್ಲ. ಎಐಎಂಐಎಂ ಜೊತೆ ಮೈತ್ರಿ ಮಾಡಿಕೊಳ್ಳುವುದನ್ನು ನಾವು ಊಹಿಸಲು ಸಾಧ್ಯವಿಲ್ಲ. ಇದಲ್ಲದೆ, ಎಐಎಂಐಎಂ ಮತ್ತು ಬಿಜೆಪಿ ನಡುವೆ ರಹಸ್ಯ ಮೈತ್ರಿ ಇದೆ, ನೀವು ಯುಪಿ ಚುನಾವಣೆಯಲ್ಲಿ ನೋಡಿರಬೇಕು, ಎಂದು ಬಿಜೆಪಿ ಮೇಲೆ ಆರೋಪಿಸಿದ್ದಾರೆ.

ಏತನ್ಮಧ್ಯೆ, ಎಐಎಂಐಎಂ ನಾಯಕ ಇಮ್ತಿಯಾಜ್ ಜಲೀಲ್ ಅವರು ಸಂಜಯ್ ರಾವುತ್ ಅವರನ್ನು ಬೆಂಬಲಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಬಿಜೆಪಿಯ ಗೆಲುವಿಗೆ ಎಐಎಂಐಎಂ ಯಾವಾಗಲೂ ಜವಾಬ್ದಾರರಾಗಿದ್ದೇವೆ ಎನ್ನಲಾಗುತ್ತಿದೆ, ನಾವು ಬಿಜೆಪಿಯ 'ಬಿ' ಟೀಮ್ ಎಂದು ಸಹ ಹೇಳಲಾಗುತ್ತದೆ, ಆದ್ದರಿಂದ ನಾವು ಅವರಿಗೆ(ಕಾಂಗ್ರೆಸ್) ನಮ್ಮೊಂದಿಗೆ ಮೈತ್ರಿ ಸರ್ಕಾರ ರಚಿಸಲು ಪ್ರಸ್ತಾಪವನ್ನು ನೀಡಿದ್ದೇವೆ. ಆದರೆ, ಅವರು ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಇರುವುದರಿಂದ ಅವರು ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಂದಿಗೂ ಒಪ್ಪುವುದಿಲ್ಲ, ಎಂದು ಮಾಹಿತಿಯನ್ನು ತಳ್ಳಿಹಾಕಿದ್ದಾರೆ.

ರಾಜಕೀಯ ಪಕ್ಷಗಳ ನಾಯಕರು ತಮ್ಮ ಪ್ರತಿಸ್ಪರ್ಧಿಗಳು ಎಐಎಂಐಎಂ ಜೊತೆ ರಹಸ್ಯ ಸಂಪರ್ಕ ಹೊಂದಿದ್ದಾರೆ, ಎಂದು ಆರೋಪಿಸುವುದು ಇತ್ತೀಚಿಗೆ ಸಾಮನ್ಯವಾದಂತೆ ಕಂಡುಬಂದಿದೆ.

RELATED TOPICS:
English summary :Shiv Sena to form alliance with AIMIM - Devendra Fadnavis reveals sansational info

ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು

ನ್ಯೂಸ್ MORE NEWS...