ಮರಕ್ಕೆ ಡಿಕ್ಕಿ ಹೊಡೆದ ಕಾರು, ಮೂವರು ದಾರುಣವಾಗಿ ಮೃತ! | JANATA NEWS

ಗದಗ : ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ರೋಣ ತಾಲೂಕಿನ ಹೊರವಲಯದಲ್ಲಿ ನಡೆದಿದೆ.
ದರ್ಶನ ರಮೇಶ ರಾಜಪುರೋಹಿತ (19), ಶೌಕತ್ ಅಲಿ ಪಠಾಣ (22), ಮೆಹಪೂಜ್ (25) ಸಾವಿಗೀಡಾಗಿದ್ದರೆ, ಅಪ್ಸಾನಾ ಮುಲ್ಲಾ (20) ಗಾಯಗೊಂಡಿದ್ದಾರೆ. ಈತನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಈ ಮೂವರು ಸ್ನೇಹಿತರು ಆಸ್ಪತ್ರೆಗೆ ದಾಖಲಾಗಿದ್ದ ಇನ್ನೋರ್ವ ಸ್ನೇಹಿತನನ್ನು ನೋಡಲು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
ರಸ್ತೆಯಲ್ಲಿ ಹೊರಟಿದ್ದ ಲಾರಿ ಚಾಲಕನೊಬ್ಬ ಕಾರು ಮರಕ್ಕೆ ಡಿಕ್ಕಿಯಾಗಿ ಹೊತ್ತಿ ಉರಿಯುತ್ತಿದ್ದನ್ನು ಕಂಡು ನಾಲ್ವರನ್ನೂ ಕಾರಿನಿಂದ ಹೊರಗೆಳೆದಿದ್ದಾನೆ. ಓವರ್ಟೇಕ್ ಮಾಡಲು ಹೋಗಿ ಈ ಅವಘಡ ಸಂಭವಿಸಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ರೋಣ ಪೊಲೀಸರು ಭೇಟಿ ನೀಡಿದ್ದಾರೆ.