3ನೇ ಗಂಡನ ಜತೆ ಸಂಸಾರ, ಮತ್ತೊಬ್ಬನ ಜತೆ ಲವ್ಬಿ ಡವ್ವಿ | JANATA NEWS

ಮೈಸೂರು : ಲವರ್ ಜೊತೆ ಸಿಕ್ಕಿದಿದ್ದ 3ನೇ ಗಂಡನ ಜತೆ ಸಂಸಾರ ನಡೆಸುತ್ತಿದ್ದ ಹೆಂಡತಿ, 3ನೇ ಗಂಡನ ಜತೆ ಸಂಸಾರ ನಡೆಸುತ್ತಿದ್ದರೂ ಮತ್ತೊಬ್ಬನ ಜತೆ ಲವ್ಬಿ ಡವ್ವಿ ಶುರುವಿಟ್ಟುಕೊಂಡು ರೆಡ್ಹ್ಯಾಂಡ್ ಆಗೇ ಸಿಕ್ಕಿಬಿದ್ದ ಘಟನೆ ರಾಜೀವ್ ನಗರದಲ್ಲಿ ಸಂಭವಿಸಿದೆ.
ಮೈಸೂರು ನಗರದ ಉದಯಗಿರಿಯ ನಿವಾಸಿಯಾಗಿರುವ ನಿಫಾ ಖಾನ್ ಎಂಬಾಕೆ ಈಗಾಗಲೇ ಮೂರು ಮದುವೆಯಾಗಿದ್ದಾಳೆ.
ಸೋಶಿಯಲ್ ಮೀಡಿಯಾ ಮೂಲಕ ಹುಡುಗರನ್ನು ಪರಿಚಯ ಮಾಡಿಕೊಂಡು, ಅವರಿಗೆ ಮೋಸ ಮಾಡುವುದೇ ಈಕೆಯ ಕೆಲಸವಾಗಿದೆ. ಈಕೆ 2021ರಲ್ಲಿ ಮೈಸೂರಿನ ರಾಜೀವ್ ನಗರದ ಆಜಾಮ್ ಖಾನ್ ಎಂಬುವರ ಜೊತೆ ಮದುವೆಯಾಗಿದ್ದಾರೆ. ಅದಕ್ಕೂ ಮುನ್ನ ಎರಡು ಮದುವೆಯಾಗಿದ್ದು, ಅದನ್ನು ತಿಳಿಯದ ಹಾಗೆ ಮುಚ್ಚಿಟ್ಟಿದ್ದಾಳೆ.
ಇವರಿಬ್ಬರೂ 2019ರ ನವಂಬರ್ ಮದುವೆ ಆಗಿದ್ದರು. ಅಜಾಮ್ ಖಾನ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ.
ಇತ್ತ ಮೈಸೂರಿನಲ್ಲೇ ಇದ್ದ ನಿಧಾಖಾನ್, ಬೇರೆಬೇರೆ ಯುವಕರ ಜತೆ ಚಾಟಿಂಗ್, ಮೀಟಿಂಗ್ನಲ್ಲೇ ಬಿಜಿಯಾಗಿದ್ದಳಂತೆ. ಮೂರು ಮದ್ವೆಯಾಗಿದ್ದರೂ ಈಕೆಗೆ ಮತ್ತೊಬ್ಬ ಪ್ರಿಯಕರ ಇದ್ದನಂತೆ.
ಈಕೆ ಬೇರೊಬ್ಬನ ಜೊತೆ ಇರುವಾಗ ಆಜಾಮ್ ಖಾನ್ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ. ನಿಫಾ ಖಾನ್ ವಿರುದ್ಧ ಸಾಕ್ಷಾಧಾರಗಳ ಸಮೇತ ಉದಯಗಿರಿ ಪೊಲೀಸರಿಗೆ ದೂರನ್ನು ನೀಡಿದ್ದಾರೆ.