ಕೇರಳದ ದೇಗುಲದಲ್ಲಿ ಮಾಜಿ ಸಿಎಂ ಎಚ್ಡಿಕೆ ವಿಶೇಷ ಪೂಜೆ! | JANATA NEWS

ಕಣ್ಣೂರು : ಎಚ್.ಡಿ.ಕುಮಾರಸ್ವಾಮಿ ಅವರು ಕೇರಳದ ಕಣ್ಣೂರು ಸಮೀಪದ ತಳಿಪರಂಬದ ಪುರಾಣ ಪ್ರಸಿದ್ಧ ಶ್ರೀ ರಾಜರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಕಣ್ಣೂರಿಗೆ ಭೇಟಿ ನೀಡಿದ್ದ ಅವರು, ತಳಿಪರಂಬದ ಪುರಾಣ ಪ್ರಸಿದ್ಧ ಶ್ರೀ ರಾಜರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು
ತ್ರೇತಾಯುಗದಲ್ಲಿ ಸಾಕ್ಷಾತ್ ಶ್ರೀರಾಮನೇ ಇಲ್ಲಿನ ಶ್ರೀ ರಾಜರಾಜೇಶ್ವರ ಸ್ವಾಮಿ ಅವರಿಗೆ ಪೂಜೆ ಸಲ್ಲಿಸಿದ್ದರು ಎಂಬ ಐತಿಹ್ಯವಿದೆ. ಇಂಥ ಪುಣ್ಯಸ್ಥಳದಲ್ಲಿ ಶಿವನ ದರುಶನ ಪಡೆದಿದ್ದು ನನ್ನ ಭಾಗ್ಯವೇ ಸರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.
ದೇವರ ದರುಶನದ ನಂತರ ಸುವಿಶಾಲವಾದ ದೇವಳಕ್ಕೆ ಪ್ರದಕ್ಷಿಣೆ ಹಾಕಿದ ಕುಮಾರಸ್ವಾಮಿ, ದೇವಾಲಯದ ನಿರ್ಮಾಣ ಶೈಲಿ, ಧಾರ್ಮಿಕ ವಿಧಿ ವಿಧಾನಗಳು ಇತ್ಯಾದಿ ಅಂಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು.