ಸಿದ್ದರಾಮಯ್ಯ ಪರಿಸ್ಥಿತಿ ತುಘಲಕ್ ರೀತಿ ಆಗಿದೆ, ಅವರ ನಾಲಿಗೆ ಮೇಲೆ ಅವರಿಗೆ ಹಿಡಿತ ಇಲ್ಲ | JANATA NEWS

ಬಳ್ಳಾರಿ : ಸಿದ್ದರಾಮಯ್ಯ ತುಘಲಕ್ ಇದ್ದಂತೆ. ಅವರ ಪರಿಸ್ಥಿತಿ ತುಘಲಕ್ ರೀತಿ ಆಗಿದೆ. ಅವರ ಪರಿಸ್ಥಿತಿ ನೆನೆಸಿಕೊಂಡ್ರೆ ನೋವಾಗುತ್ತೆ. ಅವರ ನಾಲಿಗೆ ಮೇಲೆ, ಅವರ ಮಾತುಗಳ ಮೇಲೆ ಅವರಿಗೆ ಹಿಡಿತ ಇಲ್ಲ. ಅವರು ಬುದ್ದಿವಂತರು ಅಂದುಕೊಂಡಿದ್ದಾರೆ. ಅಹಂಕಾರದಿಂದ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ರಾಜಕಾರಣಕ್ಕಾಗಿ ಗುರು ಪರಂಪರೆಯನ್ನ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದರು.
ಮಠಾಧೀಶರು ಸಿದ್ದರಾಮಯ್ಯನವರ ವಿರುದ್ಧ ಸಿಡಿದೆದ್ದು ಹೋರಾಟ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಎಲ್ಲಾ ಮಠಾಧೀಶರ ಕ್ಷಮೆ ಕೋರಬೇಕು ಅಂತ ಒತ್ತಾಯ ಒತ್ತಾಯ ಮಾಡಿದರು.
ಸ್ವಾಮೀಜಿ, ಧರ್ಮ ಸೇರಿದಂತೆ ಸಾಕಷ್ಟು ವಿಷಯಗಳಿಗೆ ಹೇಳಿಕೆ ಕೊಟ್ಟು ನಂತರ ಹೇಳಿಕೆಯನ್ನ ತಿರುಚುವ ಪ್ರಯತ್ನ ಮಾಡುತ್ತಾರೆ ಎಂದ ರಾಮುಲು, ಸಿದ್ದರಾಮಯ್ಯನವರ ಆತ್ಮವಿಶ್ವಾಸ ಇತ್ತೀಚೆಗೆ ಕಡಿಮೆ ಆಗಿದೆ. ಸಿದ್ದರಾಮಯ್ಯ ಖಿನ್ನತೆಯಲ್ಲಿ ಇದ್ದಂತೆ ಕಾಣುತ್ತೆ. ಅವರು ಕಾಂಗ್ರೆಸ್ನಲ್ಲಿ ಏಕಾಂಗಿ ಆಗಿದ್ದಾರೆ.
ಪಕ್ಷ ಅವರನ್ನ ದೂರು ತಳ್ಳುತ್ತಿದೆ ಅನ್ನುವ ಖಿನ್ನತೆಯಲ್ಲಿ ಸಿದ್ದರಾಮಯ್ಯ ಇದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದ ವ್ಯವಸ್ಥೆ 2-3 ತುಂಡು ಆಗಿದೆ. ಪಕ್ಷದ ವ್ಯವಸ್ಥೆ ವಿರುದ್ದ ಅವರ ಶಾಸಕರು ಒಂಟಿಯಾಗಿದ್ದಾರೆ. ಸಿದ್ದರಾಮಯ್ಯ ಕಡೆ ಹೋದ್ರೆ ಡಿಕೆಶಿಗೆ ಸಿಟ್ಟು, ಡಿಕೆಶಿ ಕಡೆ ಹೋದ್ರೆ ಸಿದ್ದರಾಮಯ್ಯಗೆ ಸಿಟ್ಟು ಬರುತ್ತೆ ಎಂದು ವ್ಯಂಗ್ಯವಾಡಿದರು.