ದೆಹಲಿ ಸಿಎಂ ಕೇಜ್ರಿವಾಲ್ ನಿವಾಸದ ಹೊರಗೆ ಬಿಜೆಪಿ ಪ್ರತಿಭಟನೆ : ಕೇಜ್ರಿವಾಲ್ ಹತ್ಯೆಗೆ ಯತ್ನ ಆಪ್ ಆರೋಪ | JANATA NEWS

31 Mar 2022
385

ನವದೆಹಲಿ : ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಸುಳ್ಳು ಎಂದು ಹೇಳಿರುವ ಅವರ ಹೇಳಿಕೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿತು.

ದೆಹಲಿ ಅಸೆಂಬ್ಲಿಯಲ್ಲಿ ಮಾಡಿದ ಭಾಷಣದಲ್ಲಿ ಕೇಜ್ರಿವಾಲ್ ಅವರು ಕಾಶ್ಮೀರ ಫೈಲ್ಸ್ ಪ್ರಚಾರಕ್ಕಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು, "ಸುಳ್ಳು ಚಿತ್ರ" ಎಂದು ಹೇಳಿದರು.

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಐಪಿ ಕಾಲೇಜಿನಿಂದ ಸಿಎಂ ನಿವಾಸದವರೆಗೆ ಧರಣಿ ನಡೆಯಿತು. ಮೆರವಣಿಗೆ ಸಿಎಂ ನಿವಾಸಕ್ಕೆ ತಲುಪುತ್ತಿದ್ದಂತೆಯೇ ಕೆಲ ಪ್ರತಿಭಟನಾಕಾರರು ಮುಂಭಾಗ ಬ್ಯಾರಿಕೇಡ್ ಧ್ವಂಸ ಮಾಡಲು ಮುಂದಾದರು. ಕೂಡಲೇ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರನ್ನು ನಿಯಂತ್ರಿಸಿ ಶಾಂತಿಯುತವಾಗಿ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

"ದೇಶದ ಹಿಂದೂಗಳನ್ನು ಅವಮಾನಿಸಿದ್ದಕ್ಕಾಗಿ ಕೇಜ್ರಿವಾಲ್ ಕ್ಷಮೆಯಾಚಿಸಬೇಕು ಮತ್ತು ಅವರು ಕ್ಷಮೆಯಾಚಿಸುವವರೆಗೂ [ಬಿಜೆಪಿಯ] ಯುವ ಮೋರ್ಚಾ ಅವರನ್ನು ಬಿಡುವುದಿಲ್ಲ" ಎಂದು ಸೂರ್ಯ ಟ್ವೀಟ್ ಮಾಡಿದ್ದಾರೆ.

ಆದರೆ, ಬಿಜೆಪಿಯ ಈ ಕೃತ್ಯವನ್ನು ಎಎಪಿ ಮುಖ್ಯಸ್ಥ ಹಾಗೂ ದೆಹಲಿ ಸಿಎಂ ಕೇಜ್ರಿವಾಲ್ ಅವರ ಹತ್ಯೆಯ ಯತ್ನ, ಎಂದು ಆಮ್ ಅಡ್ಮಿ ಪಾರ್ಟಿ ಆರೋಪಿಸಿದೆ.

ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಾತನಾಡಿ, ಪಂಜಾಬ್‌ನಲ್ಲಿ ಎಎಪಿ ಗೆಲುವು ಮತ್ತು ಬಿಜೆಪಿ ಸೋಲಿನಿಂದಾಗಿ ಬಿಜೆಪಿ ಅರವಿಂದ್ ಕೇಜ್ರಿವಾಲ್ ಅವರನ್ನು ಹತ್ಯೆ ಮಾಡಲು ಬಯಸಿದೆ. ಬಿಜೆಪಿ ಗೂಂಡಾಗಳನ್ನು ಪೊಲೀಸರು ಉದ್ದೇಶಪೂರ್ವಕವಾಗಿ ಸಿಎಂ ಕೇಜ್ರಿವಾಲ್ ನಿವಾಸಕ್ಕೆ ಕರೆದೊಯ್ದಿದ್ದಾರೆ. ಸಿಎಂ ನಿವಾಸದ ಮುಂಭಾಗದಲ್ಲಿದ್ದ ಸಿಸಿಟಿವಿ ಕ್ಯಾಮೆರಾ ಹಾಗೂ ತಡೆಗೋಡೆಗಳನ್ನು ಒಡೆದಿದ್ದಾರೆ.

ಬಿಜೆಪಿಯವರು ಕೇಜ್ರಿವಾಲ್ ಅವರನ್ನು ಸೋಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಅವರು ಅವರನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ. ಇಂದಿನ ಘಟನೆಯು ಸಿಎಂ ಹತ್ಯೆಗೆ ಬಿಜೆಪಿಯ ಪೂರ್ವ ಸಂಯೋಜಿತ ಯೋಜನೆಯಾಗಿದೆ ಎಂದು ಮನೀಶ್ ಸಿಸೋಡಿಯಾ ಸುದ್ದಿ ಮಾಧ್ಯಮ ಎಏನ್ಐ ಗೆ ಹೇಳಿದ್ದಾರೆ.

RELATED TOPICS:
English summary : BJP protests outside Delhi CM Kejriwal residence : AAP accused it as attempt to murder

ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಭಾಷೆಗಳ ಆಧಾರದ ಮೇಲೆ ವಿವಾದಗಳನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆ - ಪ್ರಧಾನಿ ಮೋದಿ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಉಗ್ರ ಯಾಸಿನ್ ಮಲಿಕ್ ದೋಷಿ ಎಂದು ಘೋಷಿಸಿದ ಎನ್‌ಐಎ ನ್ಯಾಯಾಲಯ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಮರಳಿ ರಾಜ್ಯ ರಾಜಕಾರಣಕ್ಕೆ? ಶೋಭಾ ಕರಂದ್ಲಾಜೆ ಸ್ಪಷ್ಟನೆ
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ಬರೀ ಫೋಟೋ ತೆಗೆಸಿಕೊಳ್ಳೋಕೆ ಸಿಟಿ ರೌಂಡ್ಸ್ ಹಾಕಬೇಡಿ!
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
ನಾರಾಯಣಗುರು, ಭಗತ್​ಸಿಂಗ್ ಪಾಠ ಕೈಬಿಟ್ಟಿಲ್ಲ, ಹೆಡಗೇವಾರ್ ಅವರ ವಿಚಾರವನ್ನು ಪಠ್ಯದಲ್ಲಿ ಸೇರಿಸಿರುವುದರಲ್ಲಿ ತಪ್ಪೇನಿದೆ?
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
1600 ಕೋಟಿ ರೂ.ಗಳ ವೆಚ್ಚದಲ್ಲಿ ಮಳೆ ನೀರು ಕಾಲುವೆಗಳ ಆಧುನೀಕರಣ
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಭಯೋತ್ಪಾದಕ ದಾಳಿಯ ಪ್ರಕರಣ : 5 ಬಂಧನ, ಭಾರಿ ಶಸ್ತ್ರಾಸ್ತ್ರ ವಶಕ್ಕೆ ಪಡೆದ ಕಾಶ್ಮೀರ ಪೊಲೀಸರು
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ಸುಗ್ರೀವಾಜ್ಞೆ ಮೂಲಕ ಮತಾಂತರ ನಿಷೇಧ ಕಾಯ್ದೆ,ಉದ್ಯೋಗಗಳನ್ನು ಸೃಷ್ಟಿಸುತ್ತದೆಯೇ?
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ತಿಳಿಗೇಡಿ ಯುವಕನಿಂದ ಪಠ್ಯಪರಿಷ್ಕರಣೆ; ಪಠ್ಯಪುಸ್ತಕ ಮುದ್ರಣ ತಕ್ಷಣ ತಡೆಹಿಡಿಯಬೇಕು
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಯುವತಿಯರನ್ನು ಲೈಂಗಿಕವಾಗಿ ಬಳಸಿ ನಂತರ ಬ್ಲ್ಯಾಕ್ ಮೇಲ್!
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಗೃಹ ಸಚಿವ ಅಗರ ಜ್ಞಾನೇಂದ್ರರನ್ನು ಭೇಟಿ ಮಾಡಿದ ನೂತನ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ

ನ್ಯೂಸ್ MORE NEWS...