ಮುಖ್ಯಮಂತ್ರಿ ಯಾದಂತವರು, ಮತ್ತೊಬ್ಬ ಮುಖ್ಯಮಂತ್ರಿಯ ಗಂಡಸ್ತನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ: ಈಶ್ವರಪ್ಪ | JANATA NEWS

ಬೆಂಗಳೂರು : ಮತ್ತೊಬ್ಬ ಮುಖ್ಯಮಂತ್ರಿಯ ಗಂಡಸ್ತನ ಬಗ್ಗೆ ಪ್ರಶ್ನೆ ಮಾಡೋದು ಸರಿಯಲ್ಲ. ಅವರು ಒಬ್ಬರು ಹಿರಿಯ ರಾಜಕಾರಣಿ. ಗಂಡಸ್ತನ ಮಾಡುವ ಅವರ ಹೇಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇನೆ ಎಂದು ಕಿಡಿಕಾರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗಂಡಸ್ತನದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಈಶ್ವರಪ್ಪ, ಗಂಡಸ್ತನ ಯಾವುದಕ್ಕೆ ಬಳಸಬೇಕು ಎಂದು ಕುಮಾರಸ್ವಾಮಿಗೆ ಗೊತ್ತಿದೆ. ಒಂದು ಕಡೆ ಬಳಸಬೇಕೋ, ಎರಡು ಕಡೆ ಬಳಸಬೇಕೋ, ಮೂರು ಕಡೆ ಬಳಸಬೇಕೋ ಎಂಬುದು ಅವರಿಗೆ ಗೊತ್ತು. ಮಾಜಿ ಸಿಎಂ ಆದವರು ಇನ್ನೊಬ್ಬ ಸಿಎಂ ಗಂಡಸ್ತನದ ಬಗ್ಗೆ ಪ್ರಶ್ನೆ ಮಾತಾಡೋದು ಸರಿಯಲ್ಲ. ಅವರ ಹೇಳಿಕೆಯನ್ನು ಖಂಡಿಸುತ್ತೇನೆ ಎಂದರು.
ಹಿಂದೂ ಸಂಪ್ರದಾಯವನ್ನು ಹಿಂದುಗಳು ಮಾಡಿಕೊಳ್ಳಲಿ. ಮುಸಲ್ಮಾನ ಸಂಪ್ರದಾಯವನ್ನು ಮುಸಲ್ಮಾನರು ಮಾಡಿಕೊಳ್ಳಲಿ. ನನ್ನ ಅಭಿಪ್ರಾಯದಲ್ಲಿ ಜಟ್ಕಾ ಕಟ್ ರೀತಿಯಲ್ಲಿ ಪ್ರಾಣಿಗಳ ವಧೆಯಾಗಬೇಕು. ವ್ಯಾಪಾರದ ಸಂದರ್ಭದಲ್ಲಿ ಹಿಂದೂ ಸಂಪ್ರದಾಯ ಪಾಲಿಸಿ ಅನ್ನೋದರಲ್ಲಿ ತಪ್ಪೇನಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರಶ್ನಿಸಿದರು.