ಗುತ್ತಿಗೆದಾರ ಸಂತೋಷ್ ಮೃತದೇಹ ಮರಣೋತ್ತರ ಪರೀಕ್ಷೆ ರವಾನೆ | JANATA NEWS

ಉಡುಪಿ : ಉಡುಪಿಯ ಶಾಂಭವಿ ಲಾಡ್ಜ್ ನಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಶವವನ್ನು ಕೊನೆಗೂ ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಗಿದೆ.
ಸ್ಥಳ ಮಹಜರ್,ಪಂಚನಾಮೆ ಬಳಿಕ, ಸಂತೋಷ್ ಸಾವಿಗೀಡಾದ ಸುಮಾರು 40 ಗಂಟೆಗಳ ಬಳಿಕ ಮೃತದೇಹವನ್ನು ಮಣಿಪಾಲದ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಅಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಉಡುಪಿಯಿಂದ ಮಣಿಪಾಲಕ್ಕೆ ಸಂತೋಷ್ ಶವ ತರಲಾಗಿದೆ.
RELATED TOPICS:
English summary :Santosh Suicide Case