ತಮ್ಮ ನಿವಾಸದಲ್ಲೇ ಪೊಲೀಸ್ ವರಿಷ್ಠಾಧಿಕಾರಿ ಶವ ಪತ್ತೆ | JANATA NEWS

ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆಯ ಎಸ್‌ಪಿ ಶೋಭಾ ಕಟಾವ್ಕರ್ (53) ಶವ ಅವರ ನಿವಾಸದಲ್ಲಿ ಪತ್ತೆಯಾಗಿದೆ.
ಪುಟ್ಟೇನಹಳ್ಳಿಯ ತಮ್ಮ ನಿವಾಸದಲ್ಲಿ ಶೋಭಾ ಕಟಾವ್ಕರ್, ಪುತ್ರನ ಜತೆಗೆ ನೆಲೆಸಿದ್ದರು. ಶುಕ್ರವಾರ ಪುತ್ರ ನಾಮದೇವ್ ತನ್ನ ಕುಟುಂಬದ ಜತೆಗೆ ಹಾಸನಕ್ಕೆ ಹೋಗಿದ್ದರು.
ಮನೆಯಲ್ಲಿ ಒಬ್ಬರೇ ಇದ್ದ ತಾಯಿ ಶೋಭಾಗೆ ಮಗ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದ ಕಾರಣ ಸೆಕ್ಯೂರಿಟಿ ಗಾರ್ಡ್‌ಗೆ ಪುತ್ರ ವಿಷಯ ತಿಳಿಸಿದ್ದಾರೆ. ಕಾವಲುಗಾರ ಒಳಗೆ ಹೋಗಿ ನೋಡಿದಾಗ ಶವವಾಗಿ ಪತ್ತೆಯಾಗಿದ್ದಾರೆ.
ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇತ್ತೀಚಿಗೆ ಎಸ್.ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ಶೋಭಾ, ಕಲಬುರಗಿಯ ಪಿಟಿಸಿ ಉಪ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿದ್ದರು. ಪುಟ್ಟೇನಹಳ್ಳಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲು ಮಾಡಲಾಗಿದೆ.