ಪಿಎಸ್‌ಐ ನೇಮಕಾತಿ ಅಕ್ರಮ: ಸಿಐಡಿ ಎದುರು ಶರಣಾದ ಮತ್ತೋರ್ವ ಕಿಂಗ್ ಪಿನ್ | JANATA NEWS

ಕಲಬುರಗಿ : ಪಿಎಸ್‌ಐ ನೇಮಕಾತಿ ಅಕ್ರಮದ ಮತ್ತೊಬ್ಬ ಕಿಂಗ್ ಪಿನ್ ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪ್ರಕರಣದಲ್ಲಿ ಕಳೆದ 21 ದಿನದಿಂದ ನಾಪತ್ತೆಯಾಗಿದ್ದ ಇಂಜಿನಿಯರ್ ಮಂಜುನಾಥ್ ಇಂದು ಸಿಐಡಿ ಕಛೇರಿಗೆ ಆಟೋದಲ್ಲಿ ಆಗಮಿಸಿ ಶರಣಾಗಿದ್ದಾನೆ. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಳಂದ ತಾಲೂಕಿನ ನೀರಾವರಿ ಇಲಾಖೆಯ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ಆಗಿರುವ ಈತ ಬ್ಲೂಟೂತ್ ಬಳಸಿ ಅಕ್ರಮ ಎಸಗಲಾಗಿರುವ ಆರೋಪ ಎದುರಿಸುತ್ತಿದ್ದಾನೆ.
ಅಕ್ರಮದಲ್ಲಿ ನನ್ನ ಹೆಸರು ಕೇಳಿ ಬರುತ್ತಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ನನಗೆ ಗೊತ್ತಿರ ಮಾಹಿತಿ ತಿಳಿಸಲು ಸಿಐಡಿ ಕಚೇರಿಗೆ ಬಂದಿದ್ದೇನೆ. ಅನಾರೋಗ್ಯ ಸಮಸ್ಯೆಯಿಂದ ಮಂಗಳೂರಿಗೆ ಹೋಗಿದ್ದೆ. ಇವತ್ತು ಅಲ್ಲಿಂದ ಬಂದಿದ್ದೇನೆ. ಅಕ್ರಮದಲ್ಲಿ ಭಾಗಿಯಾಗಿರುವ ಯಾರೂ ನನ್ನ ಸಂಪರ್ಕದಲ್ಲಿಲ್ಲ. ವಕೀಲರ ಸಲಹೆ ಮೇರೆಗೆ ನಾನು ಸಿಐಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಿದ್ದೇನೆ ಎಂದಿದ್ದಾರೆ.