ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಹತ್ಯೆ | JANATA NEWS

ಕಲಬುರಗಿ : ನಡುರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ನನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಶಹಾಬಜಾರ್ನಲ್ಲಿ ನಡೆದಿದೆ.
ನಗರದ ಶಹಾಬಜಾರ್ ನಾಕಾ ಬಳಿಯ ಲಾಲ್ ಹನುಮಾನ್ ನಗರದಲ್ಲಿ ಅಪರಾಹ್ನ ರೌಡಿಶೀಟರ್ ರಾಘು (28)ನನ್ನ ಹಳೇ ದ್ವೇಷದ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಗುಂಪೊಂದು ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾದ ರಾಘು, ರೌಡಿಶೀಟರ್ ಮಾರ್ಕೆಟ್ ಸತ್ಯನ ಸಹಚರನಾಗಿದ್ದ. ಹಳೆ ವೈಷ್ಯಮ್ಯದ ಹಿನ್ನೆಲೆಯಲ್ಲಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ರೌಡಿಶೀಟರ್ ರಾಘುನನ್ನು ವಿರೋಧಿ ಗುಂಪು ಅಟ್ಟಾಡಿಸಿಕೊಂಡು ಲಾಂಗು ಮಚ್ಚು ಹಾಗೂ ಕತ್ತಿಗಳಿಂದ ಕೊಚ್ಚಿ ಕೊಲೆ ಮಾಡಿದೆ.
ಕೊಲೆಯಾದ ರಾಘು ಕೊಲೆ, ಸುಲಿಗೆ, ಕಳ್ಳತನ ಸೇರಿದಂತೆ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ. ಈ ಕುರಿತು ಸ್ಥಳೀಯ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.