ರಾಜಸ್ಥಾನವು ಕಲ್ಲಿದ್ದಲು ಬಿಕ್ಕಟ್ಟನ್ನು ಸ್ವತಃ ತಾನೇ ಸೃಷ್ಟಿಸಿಕೊಂಡಿದೆ - ಕೇಂದ್ರ ವಿದ್ಯುತ್ ಸಚಿವ | JANATA NEWS

ನವದೆಹಲಿ : ರಾಜಸ್ಥಾನವು ಕಲ್ಲಿದ್ದಲು ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಸ್ವತಃ ತಾನೇ ಸೃಷ್ಟಿಸಿಕೊಂಡಿದೆ, ಎಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಇಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ. ವಿವಿಧ ರಾಜ್ಯಗಳಿಗೆ ಹಲವಾರು ಲಕ್ಷ ಟನ್ ಕಲ್ಲಿದ್ದಲು. ಆದರೆ ಅವರು ಅದನ್ನು ತೆಗೆದುಕೊಳ್ಳುತ್ತಿಲ್ಲ, ಎಂದು ಆರೋಪಿಸಿದ್ದಾರೆ.
ಎಎನ್‌ಐ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಅವರು, ರಾಜಸ್ಥಾನವು ಕಲ್ಲಿದ್ದಲು ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಸ್ವತಃ ತಾನೇ ಸೃಷ್ಟಿಸಿಕೊಂಡಿದೆ. ಅವರಿಗೆ(ರಾಜ್ಯ) ಸ್ಥಿರ ಕಲ್ಲಿದ್ದಲು ಗಣಿಗಳನ್ನು ನೀಡಲಾಗಿದೆ. ಗಣಿಗಾರಿಕೆಯಲ್ಲಿ ತೊಂದರೆ ಸೃಷ್ಟಿಯಾಗಿದ್ದರೆ, ಅದು ಅವರದೇ ಆಗಿದೆ.
ಅದೇ ರೀತಿ ಜಾರ್ಖಂಡ್ ಕೂಡ ತನ್ನದೇ ಆದ ಸಮಸ್ಯೆಗಳನ್ನು ಸೃಷ್ಟಿಸಿಕೊಂಡಿದೆ. ಸಮಸ್ಯೆಯನ್ನು ಬಗೆಹರಿಸಲು ನಮ್ಮ ಕಲ್ಲಿದ್ದಲು ಸಚಿವರು ಹಲವು ಬಾರಿ ಅಲ್ಲಿಗೆ ಹೋಗಬೇಕಾಯಿತು. ಡಿವಿಸಿಗೆ ಸಾವಿರಾರು ಕೋಟಿ ಬಾಕಿ ಇದೆ. ವಿದ್ಯುತ್ ಉಚಿತವಲ್ಲ, ಅವರಿಗೆ ಹಣ ನೀಡದಿದ್ದರೆ ಹೇಗೆ(ವಿದ್ಯುತ್) ಕೊಡುತ್ತಾರೆ, ಎಂದು ಆರ್.ಕೆ.ಸಿಂಗ್ ಪ್ರಶ್ನಿಸಿದರು.
ರಾಜ್ಯಗಳಲ್ಲಿನ ಕಲ್ಲಿದ್ದಲು ಬಿಕ್ಕಟ್ಟಿನ ಕುರಿತು ಕೇಂದ್ರ ವಿದ್ಯುತ್ ಸಚಿವರು ಮತ್ತಷ್ಟು ಹೇಳಿದರು, ನಾವು ವಿವಿಧ ರಾಜ್ಯಗಳಿಗೆ ಹಲವಾರು ಲಕ್ಷ ಟನ್ ಕಲ್ಲಿದ್ದಲು ಮಂಜೂರು ಮಾಡಿದ್ದೇವೆ. ಆದರೆ ಅವರು ಅದನ್ನು ಎತ್ತುತ್ತಿಲ್ಲ. ಯಾರನ್ನು ದೂಷಿಸಬೇಕು?