Fri,Aug12,2022
ಕನ್ನಡ / English

ಮಹಾರಾಷ್ಟ್ರ : ಬಿಜೆಪಿಯೊಂದಿಗೆ ಕೈಜೋಡಿಸಿ ಎನ್‌ಸಿಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ವಾಗ್ದಾಳಿ | JANATA NEWS

11 May 2022
523

ಮುಂಬೈ : ಗೊಂಡಿಯಾ ಜಿಲ್ಲಾ ಪರಿಷತ್ತಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷ(ಬಿಜೆಪಿ) ಯೊಂದಿಗೆ ಕೈಜೋಡಿಸಿರುವ ರಾಜ್ಯದ ಎಂವಿಎ ಮೈತ್ರಿ ಪಕ್ಷವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್‌ಸಿಪಿ) ಮೇಲೆ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಬುಧವಾರ ತೀವ್ರ ವಾಗ್ದಾಳಿ ನಡೆಸಿದರು.

"ಎನ್‌ಸಿಪಿ ನಮ್ಮ ಬೆನ್ನಿಗೆ ಚೂರಿ ಹಾಕಿದೆ. ಎನ್‌ಸಿಪಿ ದ್ವೇಷವನ್ನು ಬಯಸಿದರೆ, ಅದನ್ನು ಎದುರುಗಡೆ ಮಾಡಿ, ನಾವು ಅದಕ್ಕೆ ಸಿದ್ಧರಿದ್ದೇವೆ. ಮಹಾರಾಷ್ಟ್ರ ಸರ್ಕಾರವನ್ನು 3 ಪಕ್ಷಗಳು(ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್) ಸಾಮಾನ್ಯ ಕನಿಷ್ಠ ಕಾರ್ಯಕ್ರಮದ ಅಡಿಯಲ್ಲಿ ರಚಿಸಿದೆ" ಎಂದು ಪಟೋಲೆ ಸುದ್ದಿಗಾರರಿಗೆ ತಿಳಿಸಿದರು.

ಪಟೋಲೆ ಟ್ವಿಟರ್‌ ನಲ್ಲೂ ವಾಗ್ದಾಳಿ ನಡೆಸಿದ್ದು, "ಸ್ನೇಹದ ಹಸ್ತವನ್ನು ಚಾಚಿದ ನಂತರ, ಎನ್‌ಸಿಪಿ ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದೆ.", ಎಂದು ಮರಾಠಿಯಲ್ಲಿ ಬರೆದುಕೊಂಡಿದ್ದಾರೆ.

ಗೊಂಡಿಯಾದಲ್ಲಿ ಮಂಗಳವಾರ ಗೊಂಡಿಯಾ ಜಿಲ್ಲಾ ಪರಿಷತ್ತಿನ ಅಧ್ಯಕ್ಷರನ್ನು ಆಯ್ಕೆ ಮಾಡಲು ಎನ್‌ಸಿಪಿ ಪ್ರತಿಸ್ಪರ್ಧಿ ಬಿಜೆಪಿಯೊಂದಿಗೆ ಕೈಜೋಡಿಸಿತು, ಎಂವಿಎ ಮೈತ್ರಿ ಕೋಡ್ ಅನ್ನು ಮುರಿದು ಸ್ವತಂತ್ರರು ಮತ್ತು ಸ್ಥಳೀಯ ಸಂಘಟನೆಯ ಬೆಂಬಲದೊಂದಿಗೆ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರವಿಟ್ಟಿತು.

ಗೊಂಡಿಯಾ ಜಿಲ್ಲಾ ಪರಿಷತ್ತಿನಲ್ಲಿ ಒಟ್ಟು 53 ಸದಸ್ಯರ ಪೈಕಿ ಬಿಜೆಪಿ 26, ಕಾಂಗ್ರೆಸ್ 13, ಎನ್‌ಸಿಪಿ 6, ಜನತಾ ಕಿ ಪಾರ್ಟಿ 4 ಮತ್ತು ಇಬ್ಬರು ಸ್ವತಂತ್ರರನ್ನು ಹೊಂದಿದೆ. ಬಿಜೆಪಿಯ ಪಂಕಜ್ ರಹಂಗ್‌ಡೇಲ್ ಅಧ್ಯಕ್ಷರಾಗಿ ಮತ್ತು ಎನ್‌ಸಿಪಿಯ ಯಶವಂತ್ ಗುನ್ವೀರ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.

RELATED TOPICS:
English summary :Maharashtra: State Congress president strikes out against NCP for joining hands with BJP

ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ 4 ಯೋಧರು ಹುತಾತ್ಮ : 5 ಉಗ್ರರು ತಟಸ್ಥ
ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ 4 ಯೋಧರು ಹುತಾತ್ಮ : 5 ಉಗ್ರರು ತಟಸ್ಥ
ಕಚೇರಿಯ ಸಿಬ್ಬಂದಿಯ ಪುತ್ರಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ
ಕಚೇರಿಯ ಸಿಬ್ಬಂದಿಯ ಪುತ್ರಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ
ವರದಕ್ಷಿಣೆ ಕಿರುಕುಳ ಆರೋಪ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ!
ವರದಕ್ಷಿಣೆ ಕಿರುಕುಳ ಆರೋಪ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ!
ಅರುಂಧತಿ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಅರುಂಧತಿ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಆನ್‌ಲೈನ್‌ ಗೇಮ್ಸ್‌ನಲ್ಲಿ 11 ಕೋಟಿ ರೂ ಗೆದ್ದವನನ್ನ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು, 7 ಮಂದಿ ಅರೆಸ್ಟ್
ಆನ್‌ಲೈನ್‌ ಗೇಮ್ಸ್‌ನಲ್ಲಿ 11 ಕೋಟಿ ರೂ ಗೆದ್ದವನನ್ನ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು, 7 ಮಂದಿ ಅರೆಸ್ಟ್
ಕ್ಷುಲ್ಲಕ ಕಾರಣಕ್ಕೆ  ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ!
ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ!
ಪ್ರವೀಣ್ ಹತ್ಯೆ, ಪ್ರಮುಖ ಮೂವರು ಆರೋಪಿಗಳ ಬಂಧನ
ಪ್ರವೀಣ್ ಹತ್ಯೆ, ಪ್ರಮುಖ ಮೂವರು ಆರೋಪಿಗಳ ಬಂಧನ
ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ!
ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ!
ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ : ಉಲ್ಲಂಘಿಸುವವರಿಗೆ ರೂ.500 ದಂಡ
ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ : ಉಲ್ಲಂಘಿಸುವವರಿಗೆ ರೂ.500 ದಂಡ
ಚಾಮರಾಜಪೇಟೆ ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?
ಚಾಮರಾಜಪೇಟೆ ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?
ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ಸರ್ಟಿಫಿಕೇಟ್‌ ಕೋರ್ಸ್‌ ಗಿಂತ ಬೃಹತ್‌ ಚಾಪ್ಟರ್‌ 1, ಚಾಪ್ಟರ್ 2, ಚಾಪ್ಟರ್‌ 3 ಆಗುತ್ತವೆ; ಬಿಚ್ಚಲೇ?
ನನ್ನಲ್ಲೂ ದಾಖಲೆಗಳಿವೆ, ಬಿಚ್ಚಿದರೆ ಅವೇ ಸರ್ಟಿಫಿಕೇಟ್‌ ಕೋರ್ಸ್‌ ಗಿಂತ ಬೃಹತ್‌ ಚಾಪ್ಟರ್‌ 1, ಚಾಪ್ಟರ್ 2, ಚಾಪ್ಟರ್‌ 3 ಆಗುತ್ತವೆ; ಬಿಚ್ಚಲೇ?
ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್‌ ಪರೀಕ್ಷೆ ಬರೆಯುತ್ತಿದ್ದವನ ಬಂಧನ
ಸ್ಮಾರ್ಟ್ ವಾಚ್ ಬಳಸಿ ಕೆಪಿಟಿಸಿಎಲ್‌ ಪರೀಕ್ಷೆ ಬರೆಯುತ್ತಿದ್ದವನ ಬಂಧನ

ನ್ಯೂಸ್ MORE NEWS...