ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ | JANATA NEWS

16 May 2022
359

ಬೆಂಗಳೂರು : ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಮತ್ತು ಪರಿಷತ್ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ಸೋಮವಾರ ರಾಜೀನಾಮೆ ನೀಡಿದ್ದು, ನಾಳೆ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.

ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೊರಟ್ಟಿ ಅವರು ರಾಜೀನಾಮೆ ಘೋಷಣೆ ಮಾಡಿದರು.

ವಿಧಾನ ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತದೆ ಎಂದರು.

ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ಯಾವುದೇ ಷರತ್ತು ಹಾಕಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಬಸವರಾಜ ಹೊರಟ್ಟಿ ಅವರು ಸ್ಪಷ್ಟಪಡಿಸಿದರು.

ಬದಲಾವಣೆ ಬಗ್ಗೆ ಕೆಲವೊಮ್ಮೆ ಮನಸ್ಸಿಗೆ ಸಣ್ಣ,ಪುಟ್ಟ ನೋವಾಗುತ್ತದೆ. ನನಗೆ ದೇವೇಗೌಡರ ಬಗ್ಗೆ ಯಾವುದೇ ಅಸಮಾಧಾನವಿಲ್ಲ. ಅವರ ಬಳಿಗೆ ಹೋಗಿ ಮಾತನಾಡಲು ಧೈರ್ಯವಾಗಲಿಲ್ಲ. ಹಾಗಾಗಿ ಪತ್ರ ಬರೆದಿದ್ದೇನೆ. ಈಗಿನ ಪರಿಸ್ಥಿತಿ ನೋಡಿದರೆ ರಾಜಕೀಯದಲ್ಲಿರಬಾರದು ಎಂದೆನಿಸುತ್ತದೆ. ಜನರು ಈಗ ಹಾಗೇ ಇದ್ದಾರೆ, ರಾಜಕಾರಣಿಗಳು ಹಾಗೇ ಇದ್ದಾರೆ ಎಂದರು.

ಏಳು ಬಾರಿ ಜನರು ನನ್ನನ್ನು ಆರಿಸಿ ಕಳುಹಿಸಿದ್ದಾರೆ. ಶಿಕ್ಷಕರ ಕಷ್ಟಕ್ಕೆ ನಿರಂತರವಾಗಿ ಸ್ಪಂದಿಸುತ್ತಿದ್ದೇನೆ. ಇಡೀ ದೇಶದಲ್ಲಿ ನನ್ನ ರೀತಿ ಬೇರೆ ಯಾರನ್ನೂ ಆರಿಸಿ ಕಳುಹಿಸಿಲ್ಲ. ಇಂದು ಈ ಸ್ಥಾನಕ್ಕೆ ಬರಲು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ.

1980ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದೆ. 1986 ಜನತಾದಳ, ಲೋಕ ಶಕ್ತಿಯಲ್ಲಿ ಇದ್ದೆ. 2000ದಿಂದ ಇಲ್ಲಿಯವರೆಗೆ ಜೆಡಿಎಸ್‌ನಲ್ಲಿ ಇದ್ದೆ. ಜೆಡಿಎಸ್ ನಲ್ಲಿ ದೇವೇಗೌಡರು ನನ್ನನ್ನು ಕುಟುಂಬ ಸದಸ್ಯರ ತರ ನೋಡಿಕೊಂಡಿದ್ದಾರೆ.

ಸ್ವತಂತ್ರವಾಗಿ ಸ್ಪರ್ಧಿಸಿದರೂ ಪಕ್ಷವೊಂದರ ಆಸರೆ ಬೇಕೇ ಬೇಕು. ಯಾವುದೇ ಪಕ್ಷದಿಂದ ನಿಂತರೂ ನಾನು ಎಂಎಲ್‌ಸಿ ಆಗುತ್ತೇನೆ. ನನ್ನ ಭವಿಷ್ಯದ ಬಗ್ಗೆ ಯಾರೂ ಚಿಂತೆ ಮಾಡುವ ಅಗತ್ಯವಿಲ್ಲ. ಯಾವುದೇ ಅಧಿಕಾರಕ್ಕಾಗಿ ಪಕ್ಷ ಬದಲಿಸುತ್ತಿಲ್ಲ ಎಂದರು.

RELATED TOPICS:
English summary :Basavaraj resigns to Karnataka Legislative Council chairmanship. Tomorrow May 17th He will join BJP.

ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು

ನ್ಯೂಸ್ MORE NEWS...