ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಬೆದರಿಕೆ ಹಿಂದಿರೋದು 17 ವರ್ಷದ ಬಾಲಕ! | JANATA NEWS

ಬೆಂಗಳೂರು : ಏಪ್ರಿಲ್ನಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಹಲವು ಪ್ರತಿಷ್ಠಿತ ಶಾಲೆಗಳಿಗೆ ಬಾಂಬ್ ಹಾಕಲಾಗಿದೆ ಎಂದು ಬೆದರಿಕೆ ಇ-ಮೇಲ್ ಬಂದಿದ್ದವು. ನಿಮ್ಮ ಶಾಲೆಯಲ್ಲಿ ಅತ್ಯಂತ ಶಕ್ತಿಶಾಲಿಯುತ ಬಾಂಬ್ ಅಳವಡಿಸಲಾಗಿದೆ.
ಇದು ಜೋಕ್ ಅಲ್ಲ. ಈ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿ, ನೂರಾರು ಜೀವಗಳನ್ನು ಉಳಿಸಿ. ದಯವಿಟ್ಟು ತಡ ಮಾಡಬೇಡಿ. ಸದ್ಯ ಎಲ್ಲರ ಜೀವ ನಿಮ್ಮ ಕೈಯಲ್ಲಿದೆ ಎಂದು ಮೇಲ್ ನಲ್ಲಿ ಬರೆಯಲಾಗಿತ್ತು.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದೆ. ಈ ಹುಸಿ ಬಾಂಬ್ ಮೇಲ್ ಕಳುಹಿಸಲು 17 ವರ್ಷದ ಬಾಲಕ ಎಂದು ತಿಳಿದು ಬಂದಿದೆ.
ತಮಿಳುನಾಡು ಮೂಲದ ಸಲೀಂ 17 ವರ್ಷದ ಬಾಲಕ, ಇ-ಮೇಲ್ ಕಳುಹಿಸಿದ್ದಾನೆ ಎಂಬ ಸುಳಿವು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಸಲೀಂ ಸಾಫ್ಟ್ವೇರ್ ಕಂಪನಿ ಮಾಡುವ ಕನಸು ಹೊಂದಿದ್ದ ಎನ್ನಲಾಗಿದೆ. ಒಂದೇ ಸಲಕ್ಕೆ ಬಹಳಷ್ಟು ಮೇಲ್ಗಳನ್ನು ಕಳುಹಿಸುವ ಬೋಟ್ ಸಾಫ್ಟ್ವೇರ್ ಪ್ರೋಗ್ರಾಮ್ ಈತ ಡೆವೆಲಪ್ ಮಾಡಿದ್ದ. ಇದನ್ನು ಟೆಲಿಗ್ರಾಂ ಆಯಪ್ ಮೂಲಕ ವಿದೇಶಿಯರಿಗೆ ಕಳುಹಿಸಿರುವುದು ತಿಳಿದುಬಂದಿದೆ. ತಾನು ಸಿದ್ಧಪಡಿಸಿದ್ದ ಕಂಪ್ಯೂಟರ್ ಪ್ರೋಗ್ರಾಂನ್ನು ವಿದೇಶಿಯರಿಗೆ ಮಾರಾಟ ಮಾಡಿದ್ದ. ಇದನ್ನು ಬಳಸಿ ದುಷ್ಕರ್ಮಿಗಳು ಬೆಂಗಳೂರು ಮತ್ತು ಭೋಪಾಲ್ ಶಾಲೆಗಳಿಗೆ ಬೆದರಿಕೆಯ ಮೇಲ್ ಕಳುಹಿಸಿದ್ದರು ಎನ್ನಲಾಗುತ್ತಿದೆ.
ಸಲೀಂ ತಂದೆ ಲೈಬ್ರಿರಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೇಲ್ ಬಂದಿರುವ IP ಅಡ್ರೆಸ್ ಮೂಲಕ ಪೊಲೀಸರು ಸಲೀಂನನ್ನು ಪತ್ತೆ ಮಾಡಿದ್ದಾರೆ.
ಬೆದರಿಕೆ ಮೇಲ್?
A Very power full bomb has been planted in your school, attention is not a joke. this is not a joke, a very powerfull bomb has been planted in your school, immediatly call the police and sappers hundreds of lives may suffer, including yours , do not deleay. now every thing is only in your hands!