ಪತಿ ಉಳುಮೆ ಮಾಡುತ್ತಿದ್ದ ಟ್ರಾಕ್ಟರ್ ಗೆ ಸಿಲುಕಿ ಛಿದ್ರಗೊಂಡ ಪತ್ನಿದೇಹ! | JANATA NEWS
ಕೋಲಾರ : ಪತಿ ಉಳುಮೆ ಮಾಡುತ್ತಿದ್ದ ಕೃಷಿಯಂತ್ರ ಟ್ರಾಕ್ಟರ್ ರೋಟರೇಟರ್ ಗೆ ಸಿಲುಕಿ ಪತ್ನಿ ಮೃತಪಟ್ಟ ದಾರುಣ ಘಟನೆ ವೇಮಗಲ್ ಹೋಬಳಿಯ ಕಲ್ವಮಂಜಲಿ ಗ್ರಾಮದಲ್ಲಿನಡೆದಿದೆ.
ಪ್ರೇಮಾ ಎಂಬ ಮಹಿಳೆ ರೋಟರ್ ಯಂತ್ರದ ಅಲುಗುಗಳಿಗೆ ಸಿಲುಕಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪತಿ ರಾಜೇಶ್ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರು.
ಕೃಷಿ ಯಂತ್ರಧಾರೆಯಡಿ ಟ್ರಾಕ್ಟರ್ ಬಾಡಿಗೆಗೆ ತಂದಿದ್ದು, ತಮ್ಮ ಜಮೀನಿನಲ್ಲಿ ಉಳುಮೆಗೆ ಮಾಡುತಿದ್ದರು. ಈ ವೇಳೆ ಅವರ ಮೊಬೈಲ್ ಫೋನ್ ಗೆ ಕರೆ ಬಂದಿದ್ದರಿಂದ ಸೌಮ್ಯಾ ಪತಿಗೆ ಮೊಬೈಲ್ ನೀಡಲು ಟ್ರಾಕ್ಟರ್ ಬಳಿ ಬಂದಿದ್ದಾರೆ.
ಆಗ ಆಕಸ್ಮಿಕವಾಗಿ ಸೌಮ್ಯಾ ಅವರ ಸೀರೆಯ ಸೆರಗು ಟ್ರಾಕ್ಟರ್ ಚಕ್ರಕ್ಕೆ ಸಿಲುಕಿತೆನ್ನಲಾಗಿದೆ. ಇದರಿಂದ ಟ್ರ್ಯಾಕ್ಟರ್ ನಡಿಗೆ ಸೆಳೆಯಲ್ಪಟ್ಟ ಸೌಮ್ಯಾರ ದೇಹ ಛಿದ್ರ ಛಿದ್ರಗೊಂಡಿದೆ.
ವೇಮಗಲ್ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.