ಎರಡನೇ ದಿನ ಇಡಿ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ : ಇಡಿ ವಿರುದ್ಧ ಮುಂದುವರೆದ ಕಾಂಗ್ರೆಸ್ ಪ್ರತಿಭಟನೆ | JANATA NEWS

ನವದೆಹಲಿ : ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ಸಾಗಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ(ಇಡಿ) ಸತತ ಎರಡನೇ ದಿನವಾದ ಮಂಗಳವಾರವೂ ಕಾಂಗ್ರೆಸ್ ಉನ್ನತ ನಾಯಕ ಮತ್ತು ಸಂಸದ ರಾಹುಲ್ ಗಾಂಧಿ ಅವರ ವಿಚಾರಣೆ ನಡೆಸಿದೆ.
ಪ್ರಕರಣದಲ್ಲಿ ರಾಹುಲ್ ಗಾಂಧಿಯವರ ವಿಚಾರಣೆಯನ್ನು ನಡೆಸಿದ ಇಡಿ ವಿರುದ್ಧ ಪಕ್ಷಗಳ ಸಂಸದರು ಮತ್ತು ಮುಖಂಡರು ಇಂದು ಸಹ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ, ಇದು ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರದ ಸೇಡಿನ ರಾಜಕೀಯ ಎಂದು ಕರೆದಿದೆ.
ರಾಹುಲ್ ಗಾಂಧಿ(51) ಅವರು ತಮ್ಮ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಬೆಳಿಗ್ಗೆ 11:05 ರ ಸುಮಾರಿಗೆ ಮಧ್ಯ ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಾರಿ ನಿರ್ದೇಶನಾಲಯ (ಇಡಿ) ಪ್ರಧಾನ ಕಚೇರಿಗೆ ಆಗಮಿಸಿದರು.
ಇದೇ ವೇಳೆ ನಿಷೇಧಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಕೆ.ಸಿ.ವೇಣುಗೋಪಾಲ್, ಅಧೀರ್ ರಂಜನ್ ಚೌಧರಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರನ್ನು ಪೊಲೀಸರು ಬಂಧಿಸಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಇಡಿ ಸತತ ಎರಡನೇ ದಿನವೂ ಪ್ರಶ್ನಿಸಿದೆ. ತನ್ನ ಪ್ರಮುಖ ನಾಯಕರ ವಿರುದ್ಧ ಬಂಧನ ಅಥವಾ ಸುಳ್ಳು ಪ್ರಕರಣಗಳ ಬೆದರಿಕೆ ತಂತ್ರಗಳಿಗೆ ಹೆದರುವುದಿಲ್ಲ, ಎಂದು ಕಾಂಗ್ರೆಸ್ ಹೇಳಿದೆ.
ಅಲ್ಲದೇ, ಪ್ರತಿಭಟನಾ ಮೆರವಣಿಗೆ ವೇಳೆ ದೆಹಲಿ ಪೊಲೀಸರು ಕೆ.ಸಿ.ವೇಣುಗೋಪಾಲ್ ಮೇಲೆ "ಮಾರಣಾಂತಿಕ ದಾಳಿ" ನಡೆಸಿದ್ದಾರೆ, ಪಿ ಚಿದಂಬರಂ ಮತ್ತು ಪ್ರಮೋದ್ ತಿವಾರಿ ಅವರ ಪಕ್ಕೆಲುಬುಗಳನ್ನು ಮುರಿದಿದ್ದಾರೆ, ಎಂದು ಕಾಂಗ್ರೆಸ್ ಆರೋಪಿಸಿದೆ ಎಂದು ಪಿಐಬಿ ವರದಿ ಮಾಡಿದೆ.