ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡುತ್ತಿದ್ದಾರೆ: ಸಿದ್ದರಾಮಯ್ಯ | JANATA NEWS

16 Jun 2022
319

ಬೆಂಗಳೂರು : ವಿಧಾನ ಪರಿಷತ್ ಚುನಾವಣಾ ಫಲಿತಾಂಶ ಮುಂದಿನ ಚುನಾವಣೆಗೆ ದಿಕ್ಸೂಚಿ ಅನ್ನುವುದಿಲ್ಲ. ಮುಂದಿನ‌ಚುನಾವಣೆಯಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ನನ್ನ ರಾಜಕೀಯ ಕಂಡು ಹೊಟ್ಟೆ ಉರಿ ಪಡುತ್ತಿದ್ದಾರೆ. ಅಂತವರು ನಮ್ಮನ್ನು ದ್ವೇಷಿಸಬಹುದು. ನಮ್ಮ ಪಕ್ಷದಲ್ಲಿ ಅಂತವರು ಯಾರೂ ಇಲ್ಲ. ನಮ್ಮ ಪಕ್ಷದಲ್ಲಿ ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ಬೇರೆ ಪಕ್ಷದಲ್ಲಿ ಹೊಟ್ಟೆ ಉರಿಯವರು ಇದ್ದಾರೆ. ನಮ್ಮ ಶಾಸಕರು ಎಲ್ಲರೂ ನನ್ನ ಪರವೇ ಇದ್ದಾರೆ. ಮುಂದೆ ಸಿಎಂ ಯಾರು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರ ಕೋಮುವಾದ, ರಾಜಕೀಯ ದ್ವೇಷ ಸೇಡಿನ ರಾಜಕೀಯಕ್ಕೆ ಜನ ಬೇಸತ್ತಿದ್ದಾರೆ. ಅದಕ್ಕೆ ದ್ವೇಷ ರಾಜಕಾರಣವನ್ನು ಜನ ಒಪ್ಪುವುದಿಲ್ಲ. ಹಿಂದೆಯೂ ಒಪ್ಪಿಲ್ಲ, ಮುಂದೆಯೂ ಜನ ಒಪ್ಪಲ್ಲ. ಸಂವಿಧಾನಕ್ಕೆ ಆಪತ್ತು ಬಂದಾಗ ಜನ ರಕ್ಷಣೆಗೆ ನಿಲ್ಲುತ್ತಾರೆ. ನಾವೂ ಏನೂ ಇಲ್ಲದ ಕಡೆ ಗೆದ್ದಿದ್ದೇವೆ. ಜೀರೋ ಇದ್ದವರು ನಾವು. ಈಗ 2 ಕಡೆ ಗೆದ್ದಿದ್ದೇವೆ ಎಂದು ತಿಳಿಸಿದರು.

ಪರಿಷತ್ ಚುನಾವಣೆಯಲ್ಲಿ ಎರಡು ಸ್ಥಾನ ಗೆದ್ದ ಕುರಿತು ಹರ್ಷ ವ್ಯಕ್ತಪಡಿಸಿದರು. ನಾವು ಪದವೀಧರ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ, ಶಿಕ್ಷಕರ ಕ್ಷೇತ್ರದಲ್ಲಿ ನಾವು ಗೆಲ್ಲುತ್ತಿದ್ದೆವು. ಇದು ಮೊದಲ ಗೆಲುವಾಗಿದೆ.ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ‌ ಗೆಲುವು ಸಾಧಿಸಿದ್ದಾರೆ. ಅಲ್ಲಿ ಎರಡು ಬಾರಿ ಗೆದ್ದಿದ್ದ ಅರುಣ್ ಶಹಾಪೂರ ಅವರನ್ನು ಸೋಲಿಸಿ ಪ್ರಕಾಶ್ ಹುಕ್ಕೇರಿ‌ ಗೆದ್ದಿದ್ದಾರೆ. ಈ ಕ್ಷೇತ್ರವೂ ಮೂರು ಜಿಲ್ಲೆಗೆ ಸೇರಿದ್ದು, ಅಲ್ಲಿನ ಶಿಕ್ಷಕರಿಗೆ ಧನ್ಯವಾದ ತಿಳಿಸುತ್ತೇನೆ. ಅಲ್ಲಿನ ನಮ್ಮ ಎಲ್ಲ ನಾಯಕರಿಗೆ ಕೃತಜ್ಙತೆ ಸಲ್ಲಿಸುತ್ತೇನೆ. ಜನ‌ ಬದಲಾವಣೆಯನ್ನ‌ಬಯಸಿದ್ದಾರೆ. ಅದು ಈ‌ ಚುನಾವಣೆಯಿಂದ ಗೊತ್ತಾಗುತ್ತಿದೆ ಎಂದರು.

RELATED TOPICS:
English summary :My stomach is burning with my politics: Siddaramaiah

ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆಂದು ಕಳಪೆ ರಸ್ತೆ ನಿರ್ಮಾಣ, ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ!
ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆಂದು ಕಳಪೆ ರಸ್ತೆ ನಿರ್ಮಾಣ, ಗುತ್ತಿಗೆದಾರನಿಗೆ 3 ಲಕ್ಷ ರೂ. ದಂಡ!
ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!

ನ್ಯೂಸ್ MORE NEWS...