ಜನರೇ ಕಾಂಗ್ರೆಸನ್ನು ಮನೆಗೆ ಚಲೋ ಮಾಡಲಿದ್ದಾರೆ | JANATA NEWS

16 Jun 2022
381

ದಾವಣಗೆರೆ : ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡರಿಗೆ ವಿಚಾರಣೆಗೆ ಆಗಮಿಸುವಂತೆ ನೋಟಿಸ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್‌ನವರು ರಾಜಭವನ ಚಲೋ ಮಾಡುತ್ತಿರುವುದು ದುರಂತ. ಈ ರೀತಿ ಅವರು ಮಾಡಿದರೆ ಜನರೇ ಕಾಂಗ್ರೆಸನ್ನು ಮನೆಗೆ ಚಲೋ ಮಾಡಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.

ಕಾಂಗ್ರೆಸ್ ಮಾಡುತ್ತಿರುವುದು ಕಾನೂನು ಬಾಹಿರ. ಭ್ರಷ್ಟಾಚಾರದ ಪ್ರಕರಣದ ತನಿಖೆಯ ವಿರುದ್ದ ಹೋರಾಟ ಮಾಡುತ್ತಿರುವುದು ಕಾಂಗ್ರೆಸ್ ನ ದುರಂತ ಎಂದು ಹೇಳಿದರು.

ಕುಪ್ಪಳ್ಳಿಯಿಂದ ಬೆಂಗಳೂರಿಗೆ ಸಾಹಿತಿಗಳು ಪ್ರಗತಿಪರರು ಪಾದಯಾತ್ರೆ ಮಾಡುತ್ತಿರುವ ಕುರಿತು ಮಾತನಾಡಿದ ಅವರು, ಈಗಾಗಲೇ ಪಠ್ಯಕ್ರಮ ಪರಿಷ್ಕರಣೆ ಕುರಿತಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಸೂಚನೆ ನೀಡಲಾಗಿದೆ. ಪಠ್ಯಕ್ರಮದಲ್ಲಿ ಯಾವ ವಿಷಯ ಇರಬೇಕು ಎಂಬ ಬಗ್ಗೆ ಅವರೇ ನಿರ್ಧರಿಸಲಿದ್ದಾರೆ. ಜನತೆ ನೀಡಿದ ಸಲಹೆಯಂತೆ ಪಠ್ಯಪರಿಷ್ಕರಣೆ ಮಾಡಲಾಗುವುದು. ರಾಜ್ಯದ ಜನರ ಸಲಹೆ ಸೂಚನೆ ಪಡೆದು ವೆಬ್ ಸೈಟ್‌ನಲ್ಲಿ ಹಾಕಲಾಗುವುದು. ಒಟ್ಟಾರೆ ಎಲ್ಲಾ ಆಕ್ಷೇಪಣೆ ಸಲಹೆ ಪಡೆದ ನಂತರ ಪಠ್ಯ ಪರಿಷ್ಕರಣೆ ಅಂತಿಮ ರೂಪ ಪಡೆಯಲಿದೆ ಎಂದರು.

ಮೇಕೆದಾಟು ಯೋಜನೆ ಕುರಿತಂತೆ ಈಗಾಗಲೇ ಕೇಂದ್ರ ಜಲ ನಿರ್ವಹಣ ಆಯೋಗದ ಜೊತೆ ಮಾತುಕತೆ ನಡೆಸಲಾಗಿದೆ. ಇದಲ್ಲದ ತಮಿಳುನಾಡು ಸಚಿವರು ಪ್ರಧಾನಿಗೆ ಪತ್ರ ಬರೆದಿರುವುದಾಗಿ ಹೇಳಿರುವ ವಿಚಾರಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲ. ಈ ವಿಷಯದಲ್ಲಿ ಕೇಂದ್ರೀಯ ಜಲ ಆಯೋಗದ ನಿರ್ಧಾ ವೇ ಅಂತಿಮ. ಮುಂದಿನ ವಾರದಲ್ಲಿ ಸಭೆ ಕರೆಯಲ್ಲಿದ್ದು ನಮ್ಮ ವಾದವನ್ನು ಅಲ್ಲಿ ಮಡಿಸಲಾಗುವುದು ನಮಗೆ ನ್ಯಾಯ ದೊರೆಯುವ ವಿಶ್ವಾಸವಿದೆ ಎಂದರು.

RELATED TOPICS:
English summary :The people are going to chalk up the Congress

ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!
ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು
ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು

ನ್ಯೂಸ್ MORE NEWS...