ಹಲ್ಲಿನ ಚಿಕಿತ್ಸೆಗೆಂದು ಹೋಗಿ ಸೌಂದರ್ಯವನ್ನೇ ಕಳೆದುಕೊಂಡ ಸ್ಯಾಂಡಲ್‌ವುಡ್ ನಟಿ | JANATA NEWS

ಬೆಂಗಳೂರು : ವೈದ್ಯರ ಎಡವಟ್ಟಿನಿಂದಾಗಿ ಸ್ಯಾಂಡಲ್‌ವುಡ್‌ನ ನಟಿ ತನ್ನ ಹಲ್ಲು ಒಂದೇ ಅಲ್ಲ, ತನ್ನ ಸೌಂದರ್ಯವನ್ನೇ ಕಳೆದುಕೊಂಡಿದ್ದಾರೆ.
'ಎಫ್‌ಐಆರ್', '6 ಟು 6' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ಸ್ವಾತಿ ಸತೀಶ್ ಅವರು ರೂಟ್ ಕ್ಯಾನಲ್ ಮಾಡಿಸೋಕೆ ಅಂತ ಚಿಕಿತ್ಸೆಗಾಗಿ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ದಾರೆ.
ಫೈವ್ ಸ್ಟಾರ್ ಕೊಟ್ಟಿದ್ದಾರೆ ಅಂತ ಓರಿಕ್ಸ್ ಡೆಂಟಲ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಿದ್ರಂತೆ. ಆ ಬಳಿಕ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ನಟಿಯ ಮುಖ ಸಂಪೂರ್ಣ ಊದಿಕೊಂಡು ರೂಪವೇ ಬದಲಾಗಿದೆ.
ವೈದ್ಯರು ಎರಡು ದಿನದಲ್ಲಿ ಊತ ಕಮ್ಮಿಯಾಗುತ್ತೆ ಎಂದು ಹೇಳಿದ್ದರಂತೆ. ಆದ್ರೆ 20 ದಿನಗಳು ಕಳೆದ್ರೂ ಒರಿಜಿನಲ್ ಫೇಸ್ ವಾಪಸ್ಸಾಗ್ಲೇ ಇಲ್ಲ. ಆಸ್ಪತ್ರೆಗೆ ಕಾಲ್ ಮಾಡಿಸ ಹೀಗಾಗಿದೆ ಅಂತ ಹೇಳಿದ್ರೆ ಸರಿಯಾಗಿ ರೆಸ್ಪಾನ್ಸ್ ಮಾಡಿಲಿಲ್ಲ ಎನ್ನಲಾಗಿದೆ.
ರೂಟ್ ಕೆನಲ್ ಮಾಡುವ ಮೊದಲು ವಸಡಿಗೆ ಅನಸ್ತೇಶಿಯಾ ನೀಡಬೇಕಿತ್ತು. ಆದರೆ ಅನಸ್ತೇಶಿಯಾ ಬದಲಿಗೆ ಸಾಲಿಸೈನಿಕ್ ಆಸಿಡ್ ನೀಡಿದ್ದಾರೆ ಇದರಿಂದ ಬಾಯಿಯೊಳಗಿನ ಅರ್ಧ ಭಾಗ ಬರ್ನ್ ಆಗಿದೆ. ಚಿಕಿತ್ಸೆ ಮಾಡಿದ ಎರಡು ಗಂಟೆಯಲ್ಲಿ ಊತ ಕಡಿಮೆ ಆಗುತ್ತೆ ಎಂದರೆ ನಂತರ ನಾಲ್ಕು ಗಂಟೆ ಎಂದರು, ಬಳಿಕ ಎರಡು ದಿನ, ನಾಲ್ಕು ದಿನ ಹೀಗೆ ಹೇಳುತ್ತಾ ಹೋದರು. ಈಗ ಚಿಕಿತ್ಸೆ ಮುಗಿದು 20 ದಿನಗಳಾದರು ಊತ ಕಡಿಮೆ ಆಗಿಲ್ಲ ಎಂದಿದ್ದಾರೆ.
ಆ ನಂತರ ನೋವು ತಡೆದುಕೊಳ್ಳಲಾರದೆ ನಾನು ಬೇರೆ ಆಸ್ಪತ್ರೆಗೆ ತೆರಳಿದೆ. ಅಲ್ಲಿ ಟೆಸ್ಟ್ ಮಾಡಿಸಿದಾಗ ನನಗೆ ಅನಸ್ತೇಶಿಯಾ ಬದಲು ಸಾಲಿಸೈನಿಕ್ ಆಸಿಡ್ ನೀಡಿರುವುದು ಗೊತ್ತಾಯಿತು ಎಂದಿದ್ದಾರೆ.
ವೈದ್ಯರ ಎಡವಟ್ಟಿನಿಂದ ಸ್ವಾತಿ ಅವರ ಮುಖದ ಒಂದು ಕಡೆ ಫುಲ್ ಊದಿಕೊಂಡಿದೆ. ನಟಿಯಾಗಿದ್ದ ಅವರ ಮುಖ, ಈಗ ನೋಡಲೂ ಆಗದಂತೆ ವಿಕಾರವಾಗಿದೆ. ಹೀಗಾಗಿ ವಿರೂಪಗೊಂಡ ಬಳಿಕ ಮನೆಯಿಂದ ಹೊರಬರಲಾರದೆ ನಟಿ ಸ್ವಾತಿ ತೊಂದರೆ ಅನುಭವಿಸುತ್ತಿದ್ದಾರೆ.