ಸೋಮವಾರ ಬೆಂಗಳೂರಿಗೆ ಮೋದಿ: ಮೋದಿ ಓಡಾಡುವ ರಸ್ತೆಗಳ ಈ ಶಾಲೆ, ಕಾಲೇಜುಗಳಿಗೆ ರಜೆ | JANATA NEWS

19 Jun 2022
389

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ನಾಳೆ ನಗರಕ್ಕೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭದ್ರತೆಯ ದೃಷ್ಠಿಯಿಂದ ಪ್ರಧಾನಿ ಸಂಚರಿಸಲಿರುವ ಮಾರ್ಗದಲ್ಲಿ ಬರುವ ನಗರದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸಕ್ಕಾಗಿ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಕೇಂಗೇರಿ ಮತ್ತು ಕೇಂಗೇರಿ ಉಪನಗರ ವ್ಯಾಪ್ತಿಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಈ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಇದರಂತೆ, ಪ್ರಧಾನಿ ಹಾದು ಹೋಗಲಿರುವ ಐಐಎಸ್ಸಿ, ಗೊರಗುಂಟೆ ಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ.ರಾಜ್‌ಕುಮಾರ್ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ ಆರ್.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಐ ಜಂಕ್ಷನ್, ಗೋವರ್ಧನ್ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.
ಜೂ.20ರಂದು ಬೆಳಗ್ಗೆ 11.45ಕ್ಕೆ ವಿಶೇಷ ವಿಮಾನದ ಮೂಲಕ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದಾರೆ.
ಮಧ್ಯಾಹ್ನ 12.30ಕ್ಕೆ ಇಂಡಿಯನ್ ಇನ್ಸ್​ಟ್ಯೂಟ್ ಆಫ್ ಸೈನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಮಧ್ಯಾಹ್ನ 1.45ಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾರೆ.
ಮಧ್ಯಾಹ್ನ 3.35ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಮಾಡುತ್ತಾರೆ.
ಸಂಜೆ 5ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಫ್ಟರ್‌ನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸುತ್ತಾರೆ.
ಸಂ5. 50ಕ್ಕೆ ಮೈಸೂರಿಗೆ ಆಗಮಿಸುತ್ತಾರೆ.
ಸಂಜೆ 6ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನಕ್ಕೆ ಆಗಮಿಸಿ ಕೇಂದ್ರ ಯೋಜನಗಳ ಫಲಾನುವಿಗಳೊಂದಿಗೆ ಸಂವಾದ ಮಾಡುತ್ತಾರೆ.
ಸಂಜೆ 7.30ಕ್ಕೆ ಸುತ್ತೂರು ಮಠಕ್ಕೆ ಭೇಟಿ ನೀಡುತ್ತಾರೆ. ಸುತ್ತೂರು ಮಠದ ಆವರಣದಲ್ಲಿ ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆ ಮಾಡುತ್ತಾರೆ.
ನಂತರ ರಾತ್ರಿ 8.15ಕ್ಕೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರಯಾಣ ಬೆಳೆಸುತ್ತಾರೆ. ನಾಡದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುತ್ತಾರೆ. ಬಳಿಕ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಜೂ.21ರ ಬೆಳಿಗ್ಗೆ 6.30ಕ್ಕೆ ಮೈಸೂರು ಅರಮನೆ ಆವರಣಕ್ಕೆ ಆಗಮಿಸುವ ಪ್ರಧಾನಿ, ಯೋಗ ಶಿಬಿರದಲ್ಲಿ ಪಾಲ್ಗೊಳುತ್ತಾರೆ.
ಅರಮನೆಯಲ್ಲಿ ರಾಜ ಮನೆತನದವರ ಜೊತೆ ಉಪಹಾರ ಸೇವಿಸುತ್ತಾರೆ. ಬಳಿಕ ಬೆಳಿಗ್ಗೆ 9.25ಕ್ಕೆ ಮೈಸೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ.

ಪ್ರಧಾನಿ ಜೂನ್ 20ರಂದು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಭಾಗವಹಿಸಲಿರುವ ಕಾರ್ಯಕ್ರಮಕ್ಕಾಗಿ ಸಿದ್ಧತಾ ಕಾರ್ಯ ಅಂತಿಮ ಹಂತದಲ್ಲಿದ್ದು, ಸುಮಾರು 33 ಎಕರೆ ವಿಸ್ತೀರ್ಣ ಹೊಂದಿರುವ ಕೊಮ್ಮಘಟ್ಟ ನೈಸ್ ಮೈದಾನದ 10 ಎಕರೆ ಪ್ರದೇಶದಲ್ಲಿ ಸಮಾವೇಶ ಆಯೋಜಿಸಲಾಗಿದೆ. ಮುಖ್ಯ ವೇದಿಕೆ 140/140 ವಿಸ್ತೀರ್ಣ ಒಳಗೊಂಡಿದ್ದರೆ, 700/400 ವಿಸ್ತೀರ್ಣದಲ್ಲಿ ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. 40 ಸಾವಿರ ಆಸನದ ವ್ಯವಸ್ಥೆ ಮಾಡಲಾಗಿದೆ.

RELATED TOPICS:
English summary :Modi to Bangalore on Monday

ಎನ್‌ಡಿಎ ರಾಷ್ಟ್ರಪತಿ ಚುನಾವಣಾ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ ಸಲ್ಲಿಕೆ

ಎಂವಿಪಿ ಇಂದ ಹೊರಬರುವ ಸಂಜಯ್ ರಾವುತ್ ಹೇಳಿಕೆ : ಕಾಂಗ್ರೆಸ್, ಎನ್‌ಸಿಪಿ ಪಾಳಯದಲ್ಲಿ ಅಸಮಧಾನ

ಕಾಂಗ್ರೆಸ್, ಎನ್‌ಸಿಪಿ ಮೈತ್ರಿಯಿಂದ ಹೊರಬರಲು ಬಂಡಾಯ ಶಾಸಕರ ಬೇಡಿಕೆ ಪಕ್ಷ ಪರಿಗಣಿಸಲಿದೆ - ಸಂಜಯ್ ರಾವುತ್

ಕೆಂಪೇಗೌಡರ ಅಧ್ಯಾಯವಿದ್ದ ಪಠ್ಯದ ಪ್ರತಿಯನ್ನು ಡಿ.ಕೆ.ಶಿವಕುಮಾರ್ ಹರಿದಿದ್ದು ತಪ್ಪು - ಸಚಿವ ಆರ್.ಅಶೋಕ್

ಸಿದ್ದರಾಮಯ್ಯ ಕಾಲದಲ್ಲಿ ಟಿಪ್ಪು ಸುಲ್ತಾನ್ ವೈಭವೀಕರಣ ಮಾಡಿ, ಮೈಸೂರು ರಾಜವಂಶಸ್ಥರನ್ನು ಕಡೆಗಣನೆ ಮಾಡಿದ್ದರು!

ತಾಯಿ-ಇಬ್ಬರು ಮಕ್ಕಳ ಕೊಲೆ, ಜಿಲ್ಲಾ ಕೋರ್ಟ್​ನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಆರೋಪಿ ಈಗ ನಿರ್ದೋಷಿ.

ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ಯೋಜನೆ ಅಕ್ಟೋಬರ್ 2 ರಂದು ಚಾಲನೆ

ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಬೊಮ್ಮಾಯಿ ರಿಮೋಟ್ ಕಂಟ್ರೋಲ್ ಸಿಎಂ
ಪತ್ನಿಯನ್ನು ಕೊಂದು, ಮಗಳಿಗೂ ಚಾಕು ಇರಿದು ಪೊಲೀಸ್ ರಿಗೆ ಕರೆ ಮಾಡಿದ ಪತಿ!

ಪಂಚಮಸಾಲಿ 2 ಎ ಮೀಸಲಾತಿ ಹೋರಾಟ, ಸರಕಾರಕ್ಕೆ ಅಗಸ್ಟ್ 22 ಡೆಡ್ ಲೈನ್: ಬಸವನಗೌಡ ಪಾಟೀಲ್​​ ಯತ್ನಾಳ್

ಮುಂದಿನ ವರ್ಷದಿಂದ ಕಾಮೆಡ್-ಕೆ ಇರಲ್ಲ, ಈ ವರ್ಷ ಮಾತ್ರ ಸಿಇಟಿ ಮತ್ತು ಕಾಮೆಡ್-ಕೆ ಪರೀಕ್ಷೆ!

ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬುಡಕಟ್ಟು ಸಮುದಾಯದ ಮಹಿಳೆ ದ್ರೌಪದಿ ಮುರ್ಮು

ನ್ಯೂಸ್ MORE NEWS...