ಅಪ್ರಾಪ್ತೆ ಮೇಲೆ ಗಂಡ ಸೇರಿ ನಾಲ್ವರಿಂದ ಸಾಮೂಹಿಕ ಅತ್ಯಾಚಾರ | JANATA NEWS
ಚಿತ್ರದುರ್ಗ : ಪತಿಯೂ ಸೇರಿದಂತೆ ನಾಲ್ವರು ಅಪ್ರಾಪ್ತ ವಯಸ್ಕಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಆ ಪೈಕಿ ಪತಿ ಹಾಗೂ ಇನ್ನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಕೋಟೆನಾಡು ಚಿತ್ರದುರ್ಗದಲ್ಲಿ ನಡೆದಿದೆ.
ಅಪ್ರಾಪ್ತೆಯನ್ನು ಮದುವೆಯಾಗಿದ್ದಲ್ಲದೆ, ಪಾಪಿ ಪತಿಯೋರ್ವ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ.
ಬಾಲಕಿಯ ತಲೆ ಕೆಡಿಸಿ ಮದುವೆಯಾಗಿದ್ದ ವ್ಯಕ್ತಿ, ಮದುವೆ ಬಳಿಕ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದವ, ಚಿತ್ರದುರ್ಗ ನಗರದ ಚೋಳಗುಡ್ಡ ನಿರ್ಜನ ಪ್ರದೇಶದಲ್ಲಿ ಎಳೆದೊಯ್ದು ಈ ಕೃತ್ಯ ಮಾಡಿದ್ದಾರೆ .
ಜೂನ್ 7ರಂದು ನಗರದ ಹೊರವಲಯಕ್ಕೆ ಕರೆದೊಯ್ದು ಮೂವರು ಸ್ನೇಹಿತರ ಜತೆಗೂಡಿ ಹಲ್ಲೆ ಮಾಡಿದ್ದಲ್ಲದೆ, ಗ್ಯಾಂಗ್ ರೇಪ್ ಮಾಡಿರುವ ಆರೋಪವಿದೆ. ಜೊತೆಗೆ ಘಟನೆಯ ಬಗ್ಗೆ ಬಾಯ್ಬಿಟ್ಟರೆ ಕೊಲೆ ಮಾಡುವುದಾಗಿ ಪತಿ ಬೆದರಿಸಿದ್ದನು ಎಂದು ಬಾಲಕಿ ವಿವರಿಸಿದ್ದಾಳೆ ಎನ್ನಲಾಗಿದೆ. ವಯಸ್ಸಿನ ಬಾಲಕಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.