ಕಿಕ್ ಬಾಕ್ಸಿಂಗ್ ವೇಳೆ ಎದುರಾಳಿ ನೀಡಿದ ಪಂಚ್ಗೆ ಬಾಕ್ಸರ್ ಸಾವು | JANATA NEWS
ಬೆಂಗಳೂರು : ಕಿಕ್ ಬಾಕ್ಸಿಂಗ್ ಆಡುತ್ತಿರುವಾಗಲೇ ಎದುರಾಳಿ ನೀಡಿದ ಪಂಚ್ಗೆ ರಿಂಗ್ನಲ್ಲೇ ಮೈಸೂರು ಮೂಲದ ಬಾಕ್ಸರ್ ಸಾವನ್ನಪ್ಪಿದ ಘಟನೆ ನಗರದಲ್ಲಿ ನಡೆದಿದೆ.
ಮೈಸೂರಿನ ಹೊಸಕೇರಿ ನಿವಾಸಿ ನಿಖಿಲ್ (23) ಸಾವನ್ನಪ್ಪಿರುವ ಬಾಕ್ಸರ್.
ಕೆ.ಎನ್.ಕರ್ನಾಟಕ ಕಿಕ್ ಬಾಕ್ಸಿಂಗ್ ಅಸೋಸಿಯೇಷನ್ ವತಿಯಿಂದ ಸ್ಪರ್ಧೆ ಆಯೋಜನೆಗೊಂಡಿತ್ತು. ಸ್ಪರ್ಧೆ ವೇಳೆ ನಿಖಿಲ್ ಎದುರಾಳಿ ಜೊತೆ ಸೆಣಸಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಎದುರಾಳಿ ನೀಡಿದ ಪಂಚ್ಗೆ ತಲೆಗೆ ಗಂಭೀರ ಗಾಯವಾಗಿ, ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
RELATED TOPICS:
English summary :Boxer dies due to punch given by opponent during kickboxing