ಕಾಲೇಜು ವಿದ್ಯಾರ್ಥಿಗಳ ಲಿಪ್ ಲಾಕ್ ವಿಡಿಯೋ ವೈರಲ್ ಕೇಸ್: ಪೊಲೀಸ್ ಆಯುಕ್ತರ ಪ್ರತಿಕ್ರಿಯೆ | JANATA NEWS

ಮಂಗಳೂರು : ನಗರದ ಖಾಸಗಿ ಪಿಯು ಕಾಲೇಜೊಂದರ ವಿದ್ಯಾರ್ಥಿಗಳ ಕಿಸ್ಸಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಆಯುಕ್ತರು, ಈ ಘಟನೆಯು ನಾಲ್ಕೈದು ತಿಂಗಳ ಹಿಂದೆ ನಡೆದಿದೆ. ಬಾವುಟಗುಡ್ಡೆಯಲ್ಲಿ ಅಪಾರ್ಟ್ಮೆಂಟ್ವೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳು ರೂಮ್ ಮಾಡಿಕೊಂಡಿದ್ದು, ಅಲ್ಲಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಟ್ರುತ್ ಆ್ಯಂಡ್ ಡೇರ್ ಗೇಮ್ ಆಡಿದ್ದಾರೆ.
ಈ ಸಂದರ್ಭದಲ್ಲಿ ಡೇರ್ ಆಟದಂತೇ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ್ದಾರೆ. ಅಲ್ಲಿಯೇ ಈ ವಿಡಿಯೋ ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಇನ್ನು ಈ ರೂಂನಲ್ಲಿ ವಿದ್ಯಾರ್ಥಿಗಳು ಮದ್ಯಪಾನ ಸೇರಿ ಮಾದಕ ವಸ್ತು ತೆಗೆದುಕೊಳ್ಳುತ್ತಿದ್ದರು. ಈ ವಿಚಾರ ರೂಂನ ಮಾಲೀಕರಿಗೆ ತಿಳಿದು ವಿದ್ಯಾರ್ಥಿಗಳನ್ನು ಹೊರಗೆ ಹಾಕಿದ್ದರು ಎಂದು ವಿವರಿಸಿದ್ದಾರೆ.
ವಿಡಿಯೋ ಮಾಡಿದ ವಿದ್ಯಾರ್ಥಿ ಇತ್ತೀಚಿಗೆ ತನ್ನ ತರಗತಿಯ ವಾಟ್ಸ್ಆಯಪ್ ಗ್ರೂಪ್ಗೆ ವಿಡಿಯೋ ಹಾಕಿದ್ದಾನೆ. ಈ ವಿಡಿಯೋ ಶಿಕ್ಷಕರ ಗಮನಕ್ಕೆ ಬಂದು ಆ ವಿದ್ಯಾರ್ಥಿ ಮತ್ತು ಇತರ ವಿದ್ಯಾರ್ಥಿಗಳ ವಿರುದ್ಧ ಶಿಸ್ತುಕ್ರಮ ಕೈಗೊಂಡಿದ್ದಾರೆ. ಈ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ಮಾಡುತ್ತಿದ್ದೇವೆ.
ವಿಡಿಯೋ ಮಾಡಿದ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹಾಗೆಯೇ ವಿದ್ಯಾರ್ಥಿನಿಯರನ್ನೂ ಠಾಣೆಗೆ ಕರೆಸಿ ವಿಚಾರಿಸಲಾಗಿದೆ. ವಿದ್ಯಾರ್ಥಿನಿಯರ ವಯಸ್ಸನ್ನು ಪರಿಶೀಲಿಸಿ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಆಯುಕ್ತರು ಹೇಳಿದರು.
Truth-Dare ಆಟದ ನೆಪದಲ್ಲಿ ಕಿಸ್ಸಿಂಗ್ ಮಾಡುತ್ತಿರುವ ದೃಶ್ಯ ವೈರಲ್ ಆದ ಬೆನ್ನಲ್ಲೇ ಮತ್ತೊಂದು ಸೆಕ್ಸ್ ವಿಡಿಯೋ ವೈರಲ್ ಆಗಿದ್ದು, ಇವರ ಕೃತ್ಯಕ್ಕೆ ಕಾಲೇಜಿನ ಇರತ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಮುಜುಗರ ಉಂಟಾಗಿದೆ. ಕಾಲೇಜು ಯೂನಿಫಾರಂನಲ್ಲೇ ಈ ವಿದ್ಯಾರ್ಥಿಗಳು ಇದ್ದಾರೆ.