ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಉಪನ್ಯಾಸಕ ನೇಣಿಗೆ ಶರಣು | JANATA NEWS

ಉಡುಪಿ : ಕುಂದಾಪುರದಲ್ಲಿರುವ ಖಾಸಗಿ ಉಪನ್ಯಾಸಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನೆಲ್ಯಾಡಿ ಮೂಲದ ಆನಂದ ಗೌಡ ನೇಣಿಗೆ ಶರಣಾದ ಉಪನ್ಯಾಸಕ. ಕುಂದಾಪುರ ಅಂಕದಕಟ್ಟೆ ಬಾಡಿಗೆ ಮನೆಯಲ್ಲಿ ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ.
ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕೋಟೇಶ್ವರದ ಎಕ್ಸೆಲೆಂಟ್ ಕಾಲೇಜಿನ, ನೆಲ್ಯಾಡಿ ಮೂಲದ ಆನಂದ ಗೌಡ ನೇಣಿಗೆ ಶರಣಾದ ಉಪನ್ಯಾಸಕ.. ಕುಂದಾಪುರ ಅಂಕದಕಟ್ಟೆ ಬಾಡಿಗೆ ಮನೆಯಲ್ಲಿ ಇಂದು ಬೆಳಗ್ಗೆ ನೇಣಿಗೆ ಶರಣಾಗಿದ್ದಾರೆ.
ಇವರು ಈ ಕಾಲೇಜಿನಲ್ಲಿ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಒಂದು ತಿಂಗಳ ಹಿಂದಷ್ಟೇ ಇವರು ಮದುವೆಯಾಗಿ ದಾಂಪತ್ಯ ಜೀವನಕ್ಕೆ ಪ್ರವೇಶಿಸಿದ್ದರು.
ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಆದರೆ ನಿಖರ ಕಾರಣ ಏನು ಎಂಬುದು ಇನ್ನೂ ಖಚಿತವಾಗಿಲ್ಲ. ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.