ಯಡಿಯೂರಪ್ಪ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ | JANATA NEWS
ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಶನಿವಾರ ಬಿಎಸ್ವೈ ಅವರನ್ನು ಭೇಟಿ ಮಾಡಿದ ಬಳಿಕ ಮಾತುಕತೆ ನಡೆಸಿದ ಅವರು, ಯಡಿಯೂರಪ್ಪನವರು ನಿನ್ನೆ ನೀಡಿದ್ದು ಸಲಹೆ ಅಷ್ಟೇ ಎಂದರು.
ಯಡಿಯೂರಪ್ಪ ಅಂದ್ರೆ ಒಂದು ದೊಡ್ಡ ಶಕ್ತಿ. ನಾಲ್ಕು ದಶಗಳಿಂದ ಯಡಿಯೂರಪ್ಪ ಇದ್ದಾರೆ. ಯಡಿಯೂರಪ್ಪ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ. ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಲಿಲ್ಲ ಈಗ ಸೃಷ್ಟಿ ಮಾಡ್ತಾರಾ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪರು ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳುತ್ತಾರೆ. ಆ ಕ್ಷಣ ಕ್ಷೇತ್ರದ ಜನರ ಒತ್ತಾಯಕ್ಕೆ ಯಡಿಯೂರಪ್ಪ ಹಾಗೆ ಹೇಳಿದ್ದಾರೆ. ಅದು ಸಲಹೆ ಅಷ್ಟೇ ಎಂದರು.
RELATED TOPICS:
English summary :Chief Minister Basavaraja Bommai visited Yeddyurappas residence