Fri,Aug12,2022
ಕನ್ನಡ / English

ಪುಷ್ಪ ಚಿತ್ರದ ಸ್ಟೈಲ್​​ನಲ್ಲಿ ಗಾಡಿ ಆಲ್ಟರ್​​ ಮಾಡಿ ಗಾಂಜಾ ಮಾರಾಟ: ಏಳು ಜನರ ಬಂಧನ | JANATA NEWS

24 Jul 2022
471

ಬೆಂಗಳೂರು : ಪುಷ್ಪ ಸಿನಿಮಾ ಸ್ಟೈಲ್​ನಲ್ಲಿ ವಾಹನವನ್ನು ಆಲ್ಟರೇಷನ್ ಮಾಡಿ ಗಾಂಜಾ ಸಪ್ಲೈ ಮಾಡುತ್ತಿದ್ದ ಏಳು ಜನ ಆರೋಪಿಗಳನ್ನು ಬೇಗೂರು ಪೊಲೀಸ್​ ಅಧಿಕಾರಿಗಳು ಅರೆಸ್ಟ್​ ಮಾಡಿದ್ದಾರೆ.

ಕುಣಿಗಲ್‌ ತಾಲೂಕಿನ ಕೆ.ಆರ್‌.ಅರವಿಂದ್‌(26), ತಾವರೆಕೆರೆ ನಿವಾಸಿ ಪವನ್‌ ಕುಮಾರ್‌ (27), ಮಂಗಳೂರಿನ ಅಮ್ಜದ್‌ ಇತಿ ಯಾರ್‌ ಅಲಿಯಾಸ್‌ ಇಮ್ರಾನ್‌ ಅಲಿಯಾಸ್‌ ಇರ್ಷಾದ್‌ (27) ಈ ಆರೋಪಿಗಳ ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಬೀದರ್‌ನ ಭಾಲ್ಕಿ ಪ್ರಭು(27), ದಕ್ಷಿಣ ಕನ್ನಡದ ನಜೀಮ್‌ (26) ಮತ್ತು ಆಂಧ್ರಪ್ರದೇಶದ ಭೂಪಾಲ ಪಟ್ಟಣಂನ ಪತ್ತಿ ಸಾಯಿ ಚಂದ್ರ ಪ್ರಕಾಶ್‌ (19) ಬಂಧಿತರು.

ಏಳು ಮಂದಿ ಆರೋಪಿಗಳ ವಿರುದ್ಧ ಆಂಧ್ರಪ್ರದೇಶ, ಬೆಂಗಳೂರು ನಗರ, ಗ್ರಾಮಾಂತರದ ವಿವಿಧ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ, ಎನ್‌ಡಿಪಿಎಸ್‌ ಹಾಗೂ ದರೋಡೆ ಸೇರಿ ಹಲವು ಅಪರಾಧ ಪ್ರಕರಣಗಳ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ.

ಗಾಂಜಾ ಸಾಗಿಸಲು ಅನುಕೂಲವಾಗುವಂತೆ ಬೊಲೆರೋ ಪಿಕಪ್ ವಾಹನ ಮಾರ್ಪಾಡು ಮಾಡಿಕೊಂಡಿದ್ದರು. ಗೂಡ್ಸ್‌ ವಾಹನದ ಲಗೇಜ್‌ ಇಡುವ ಪ್ಲಾಟ್‌ಫಾರಂ ಕೆಳಭಾಗದಲ್ಲಿ ದೊಡ್ಡ ಬಾಕ್ಸ್‌ ಮಾಡಿಕೊಂಡು ಅದರಲ್ಲಿ 168 ಕೆ.ಜಿ. 630 ಗ್ರಾಂ ಗಾಂಜಾ ಇಟ್ಟಿರುವುದು ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಭು ಮತ್ತು ಪತ್ತಿ ಸಾಯಿ ಚಂದ್ರಪ್ರಕಾಶ್‌ ವಿಚಾರಣೆಯಲ್ಲಿ ತೆಲುಗಿನ ಪುಷ್ಪಾ ಸಿನಿಮಾದ ಪ್ರೇರಣೆಯಿಂದ ಗೂಡ್ಸ್‌ ವಾಹನಕ್ಕೆ ಪ್ರತ್ಯೇಕ ಬಾಕ್ಸ್‌ ಮಾಡಿಕೊಂಡು ಗಾಂಜಾ ಸಾಗಾಟ ಮಾಡುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದರು ಎನ್ನಲಾಗಿದೆ. ಇನ್ನು, ಬಂಧಿತ ಆರೋಪಿಗಳಿಂದ ಸರಿ ಸುಮಾರು 1 ಕೋಟಿ ಮೌಲ್ಯದ 175 ಕೆ.ಜಿ ಗಾಂಜಾ ವಶಪಡೆದುಕೊಂಡಿದ್ದಾರೆ.

RELATED TOPICS:
English summary :Car alter in the style of Pushpa film and sell ganja: Seven people arrested

ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ 4 ಯೋಧರು ಹುತಾತ್ಮ : 5 ಉಗ್ರರು ತಟಸ್ಥ
ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ 4 ಯೋಧರು ಹುತಾತ್ಮ : 5 ಉಗ್ರರು ತಟಸ್ಥ
ಕಚೇರಿಯ ಸಿಬ್ಬಂದಿಯ ಪುತ್ರಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ
ಕಚೇರಿಯ ಸಿಬ್ಬಂದಿಯ ಪುತ್ರಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ
ವರದಕ್ಷಿಣೆ ಕಿರುಕುಳ ಆರೋಪ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ!
ವರದಕ್ಷಿಣೆ ಕಿರುಕುಳ ಆರೋಪ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ!
ಅರುಂಧತಿ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಅರುಂಧತಿ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಆನ್‌ಲೈನ್‌ ಗೇಮ್ಸ್‌ನಲ್ಲಿ 11 ಕೋಟಿ ರೂ ಗೆದ್ದವನನ್ನ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು, 7 ಮಂದಿ ಅರೆಸ್ಟ್
ಆನ್‌ಲೈನ್‌ ಗೇಮ್ಸ್‌ನಲ್ಲಿ 11 ಕೋಟಿ ರೂ ಗೆದ್ದವನನ್ನ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು, 7 ಮಂದಿ ಅರೆಸ್ಟ್
ಕ್ಷುಲ್ಲಕ ಕಾರಣಕ್ಕೆ  ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ!
ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ!
ಪ್ರವೀಣ್ ಹತ್ಯೆ, ಪ್ರಮುಖ ಮೂವರು ಆರೋಪಿಗಳ ಬಂಧನ
ಪ್ರವೀಣ್ ಹತ್ಯೆ, ಪ್ರಮುಖ ಮೂವರು ಆರೋಪಿಗಳ ಬಂಧನ
ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ!
ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ!
ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ : ಉಲ್ಲಂಘಿಸುವವರಿಗೆ ರೂ.500 ದಂಡ
ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ : ಉಲ್ಲಂಘಿಸುವವರಿಗೆ ರೂ.500 ದಂಡ
ಚಾಮರಾಜಪೇಟೆ ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?
ಚಾಮರಾಜಪೇಟೆ ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?

ನ್ಯೂಸ್ MORE NEWS...