ಸ್ವಂತ ಮಗನನ್ನೇ ಬರ್ಬರವಾಗಿ ಹತ್ಯೆ ಮಾಡಿ, ತಡೆಯಲು ಬಂದ ಪತ್ನಿ ಮೇಲೂ ಮಾರಣಾಂತಿಕವಾಗಿ ಹಲ್ಲೆ | JANATA NEWS

ಬೆಳಗಾವಿ : ತಂದೆಯೇ ನಾಲ್ಕು ವರ್ಷದ ಮಗನನ್ನು ಬರ್ಬರ ಹತ್ಯೆ ಮಾಡಿರೋ ಘಟನೆ ಗೋಕಾಕ ತಾಲೂಕಿನ ಶಿಲ್ತಿಭಾವಿ ಗ್ರಾಮದ ಹೊರವಲಯದಲ್ಲಿರುವ ಘಟನೆ ನಡೆದಿದೆ.
ಪ್ರೀತಮ ಹಕಾರಿ (4) ಅಪ್ಪನಿಂದಲೇ ಕೊಲೆಯಾದ ಬಾಲಕ. ಪತ್ನಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ಮುತ್ತೆಪ್ಪ ಅಕ್ಕಣಿ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡುತ್ತಿರುವಾಗ ತಡೆಯಲು ಬಂದ ಪತ್ನಿ ಲಕ್ಷ್ಮೀ ಮೇಲೂ ಮಾರಣಾಂತಿಕವಾಗಿ ಹಲ್ಲೆಗೆ ಮಾಡಿದ್ದಾನೆ. ಈ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :He brutally killed his own son and fatally attacked his wife who came to stop him