Fri,Aug12,2022
ಕನ್ನಡ / English

ಪ್ರವೀಣ್ ಹತ್ಯೆ ಹಿನ್ನೆಲೆಯಲ್ಲಿ ಸರ್ಕಾರದ ಜನೋತ್ಸವ ರದ್ದು, ಮಧ್ಯರಾತ್ರಿ ಸಿಎಂ ಘೋಷಣೆ | JANATA NEWS

28 Jul 2022
448

ಬೆಂಗಳೂರು : ಬಿಜೆಪಿ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಒಂದು ವರ್ಷದ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬುಧವಾರ ಮಧ್ಯರಾತ್ರಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಸಿಎಂ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನೋತ್ಸವ ರದ್ದು ಮಾಡಿರುವ ವಿಷಯ ಪ್ರಕಟಿಸಿದ್ದಾರೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಅವರು ಇಂದು ದಿಢೀರ್ ಸುದ್ದಿಗೋಷ್ಠಿ ಕರೆದು ಮಾಹಿತಿ ನೀಡಿದ್ದು, ಆರ್‌.ಟಿ. ನಗರದಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ 12.30ಕ್ಕೆ ತುರ್ತು ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ, ಬೊಮ್ಮಾಯಿ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಯ ಹಿನ್ನೆಲೆಯಲ್ಲಿ ಜನೋತ್ಸವವನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದರು.

ಒಬ್ಬ ಅತ್ಯಂತ ಅಮಾಯಕ ಯುವಕನನ್ನು ಸಂಚಿನಿಂದ ಯೋಜನಾಬದ್ಧವಾಗಿ ಕೊಲೆ ಮಾಡಿದ್ದು ಅಮಾನವೀಯ, ಖಂಡನೀಯ. ಮಾತುಗಳಲ್ಲಲ್ಲ ಮನಸ್ಸಲ್ಲೂ ಆಕ್ರೋಶವಿದೆ. ಹರ್ಷ ಕೊಲೆ ನಡೆದ ಕೆಲವೇ ದಿನಗಳಲ್ಲಿ ಈ ಘಟನೆ ಆಗಿರುವುದು ಮನಸಿಗೆ ಘಾಸಿ ಮಾಡಿದೆ. ಜನೋತ್ಸವ ಮಾಡಲು ನನ್ನ ಮನಃಸಾಕ್ಷಿ ಒಪ್ಪಲಿಲ್ಲ. ಹಾಗಾಗಿ ಮುಂದೂಡಲು ತೀರ್ಮಾನಿಸಿದೆ. ರಾಜ್ಯಾಧ್ಯಕ್ಷರು ಪ್ರವೀಣ್ ಮನೆಗೆ ತೆರಳಿ ಮನೆಯವರಿಗೆ ಸಮಾಧಾನ ಹೇಳಿದ್ದಾರೆ ಎಂದು ಸಿಎಂ ವಿವರಿಸಿದರು.

ಜನೋತ್ಸವ ನಡೆಸುವ ಮೂಲಕ ನಮ್ಮ ಸರ್ಕಾರ ಜನಪರವಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದನ್ನು, ಮುಂದಿನ ಯೋಜನೆಗಳನ್ನು ಘೋಷಿಸಬೇಕು ಎಂದು ನಿಶ್ಚಯಿಸಿದ್ದೆವು. ನಮ್ಮ ಪಕ್ಷದ ಅಮಾಯಕ ಹಾಗೂ ನಿಷ್ಠಾವಂತ ಕಾರ್ಯಕರ್ತ ಪ್ರವೀಣರ ಹತ್ಯೆಯ ನೋವು ಹಾಗೂ ಯುವ ಸಮುದಾಯದ ಭಾವನೆಯನ್ನು ಗಮನಿಸಿದೆ. ಹಾಗಂತ, ಯುವಕರು, ದಲಿತರು, ಹಿಂದುಳಿದವರು ಹಾಗೂ ಮಹಿಳೆಯರ ಪರವಾದ ಕಾರ್ಯಕ್ರಮಗಳನ್ನು ಮುಂದುವರಿಸುತ್ತೇವೆ. ದೊಡ್ಡಬಳ್ಳಾಪುರ ಹಾಗೂ ವಿಧಾನಸೌಧದಲ್ಲಿ ಇಂದು ನಡೆಯುವ ಎಲ್ಲ ಕಾರ್ಯಕ್ರಮಗಳು ರದ್ದಾಗಿವೆ. ಆದರೆ, ಜನಪರ ಕಾರ್ಯಕ್ರಮ-ಯೋಜನೆಗಳನ್ನು ಮಾಧ್ಯಮದವರ ಮೂಲಕ ಪ್ರಕಟಿಸುತ್ತೇವೆ ಎಂದೂ ಅವರು ಹೇಳಿದರು.

ಜನೋತ್ಸವಕ್ಕೆ ಬಹಳಷ್ಟು ಜನರು ಬರಲಿದ್ದರು. ಅವರಿಗೆ ಆದ ಅನನುಕೂಲಕ್ಕೆ, ಆ ಭಾಗದ ಜನರು, ನಾಯಕರು, ಕಾರ್ಯಕರ್ತರೆಲ್ಲ ಕ್ಷಮೆ ಕೋರುತ್ತೇನೆ ಎಂಬುದಾಗಿ ಬಸವರಾಜ ಬೊಮ್ಮಾಯಿ ಹೇಳಿದರು.

ನಮಗೆ ನನ್ನ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನ ಜೀವ ಮುಖ್ಯ ಅಷ್ಟೇ ಅಲ್ಲದೇ ಸಾಮಾನ್ಯ ಪ್ರಜೆಯ ಜೀವ ಮುಖ್ಯ. ಅಮಾಯಕನ ಜೀವ ಪಡೆಯುವವರ ಪಾಪದ ಕೊಡ ತುಂಬಿದೆ. ನಾನು ಯುವ ಜನತೆಯ ಭಾವನೆಗಳನ್ನು ಅರ್ಥ ಮಾಡಿಕೊಂಡಿದ್ದೇನೆ ಅವರ ಭಾವನೆಗೆ ತಕ್ಕಂತೆ ಕ್ರಮ ಆಗುತ್ತದೆ. ನಾನು ಗೃಹ ಸಚಿವನಾಗಿದ್ದಾಗ 15 ಕ್ಕೂ ಹೆಚ್ಚು ಜನರನ್ನು ತಿಹಾರ್ ಜೈಲಿಗೆ ಕಳುಹಿಸಿದ್ದೇನೆ. ಇದನ್ನು ಮಟ್ಟ ಹಾಕಲು ನಮಗೆ ಶಕ್ತಿ ಇದೆ. ಹೀಗಾಗಿ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದು ಅಂತಾರಾಜ್ಯ ಪ್ರಕರಣ ಆಗಿದೆ. ಈ ಸಂದರ್ಭದಲ್ಲಿ ಏನೇ ಹೇಳಿದರೂ ತನಿಖೆ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಈಗ ಏನೂ ಹೇಳುವುದಿಲ್ಲ ಎಂದರು.

RELATED TOPICS:
English summary :In the wake of Praveen s murder, the government s Janotsava was cancelled, the CMs announcement at midnight

ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಗಾಗಿ ಈಗ ಅಂತರರಾಷ್ಟ್ರೀಯ ಮನ್ನಣೆ
ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ 4 ಯೋಧರು ಹುತಾತ್ಮ : 5 ಉಗ್ರರು ತಟಸ್ಥ
ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದಕ ದಾಳಿಯಲ್ಲಿ 4 ಯೋಧರು ಹುತಾತ್ಮ : 5 ಉಗ್ರರು ತಟಸ್ಥ
ಕಚೇರಿಯ ಸಿಬ್ಬಂದಿಯ ಪುತ್ರಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ
ಕಚೇರಿಯ ಸಿಬ್ಬಂದಿಯ ಪುತ್ರಿಯರೊಂದಿಗೆ ರಕ್ಷಾಬಂಧನ ಆಚರಿಸಿದ ಪ್ರಧಾನಿ ಮೋದಿ
ವರದಕ್ಷಿಣೆ ಕಿರುಕುಳ ಆರೋಪ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ!
ವರದಕ್ಷಿಣೆ ಕಿರುಕುಳ ಆರೋಪ, ನಶೆ ಮತ್ತಲ್ಲಿ ಪತ್ನಿಯ ತಲೆಮೇಲೆ ಮೂತ್ರ ವಿಸರ್ಜನೆ ಮಾಡಿ ವಿಕೃತಿ!
ಅರುಂಧತಿ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಅರುಂಧತಿ ಸಿನಿಮಾದಿಂದ ಪ್ರಭಾವಿತನಾದ ವಿದ್ಯಾರ್ಥಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ
ಆನ್‌ಲೈನ್‌ ಗೇಮ್ಸ್‌ನಲ್ಲಿ 11 ಕೋಟಿ ರೂ ಗೆದ್ದವನನ್ನ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು, 7 ಮಂದಿ ಅರೆಸ್ಟ್
ಆನ್‌ಲೈನ್‌ ಗೇಮ್ಸ್‌ನಲ್ಲಿ 11 ಕೋಟಿ ರೂ ಗೆದ್ದವನನ್ನ 1 ಕೋಟಿಗಾಗಿ ಅಪಹರಿಸಿದ್ದ ಸ್ನೇಹಿತರು, 7 ಮಂದಿ ಅರೆಸ್ಟ್
ಕ್ಷುಲ್ಲಕ ಕಾರಣಕ್ಕೆ  ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ!
ಕ್ಷುಲ್ಲಕ ಕಾರಣಕ್ಕೆ ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ!
ಪ್ರವೀಣ್ ಹತ್ಯೆ, ಪ್ರಮುಖ ಮೂವರು ಆರೋಪಿಗಳ ಬಂಧನ
ಪ್ರವೀಣ್ ಹತ್ಯೆ, ಪ್ರಮುಖ ಮೂವರು ಆರೋಪಿಗಳ ಬಂಧನ
ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ!
ಚಾಮರಾಜಪೇಟೆ ಮೈದಾನದಲ್ಲಿ ಸರ್ಕಾರದಿಂದಲೇ ಧ್ವಜಾರೋಹಣ, ತಿರಂಗ ಹಾರಾಟ ಹೊರತಾಗಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ!
ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ : ಉಲ್ಲಂಘಿಸುವವರಿಗೆ ರೂ.500 ದಂಡ
ದೆಹಲಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯ : ಉಲ್ಲಂಘಿಸುವವರಿಗೆ ರೂ.500 ದಂಡ
ಚಾಮರಾಜಪೇಟೆ ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?
ಚಾಮರಾಜಪೇಟೆ ಈದ್ಗಾ ಮೈದಾನ ಏನ್​ ಜಮೀರ್ ಅಹ್ಮದ್ ಖಾನ್​ ಅಪ್ಪನ ಆಸ್ತಿಯೇ?

ನ್ಯೂಸ್ MORE NEWS...