ಸಹಾಯದ ನೆಪದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಕಾನ್ಸ್ಟೇಬಲ್ ಬಂಧನ | JANATA NEWS
ಬೆಂಗಳೂರು : ಡ್ರಾಪ್ ಕೊಡುವ ನೆಪದಲ್ಲಿ ಅಪ್ತಾಪ್ತೆಯನ್ನ ಮನೆಗೆ ಕರೆದೊಯ್ದು ಅತ್ಯಾಚಾರವೆಸಗಿದ ಆರೋಪದಡಿ ಗೋವಿಂದರಾಜನಗರ ಪೊಲೀಸ್ ಠಾಣೆಯ ಪೇದೆಯೊಬ್ಬರನ್ನ ಬಂಧಿಸಲಾಗಿದೆ.
ಪವನ್ ದ್ಯಾವಣ್ಣನವರ್ ಬಂದಿತ ಕಾನ್ಸ್ಟೇಬಲ್. ಅಪ್ರಾಪ್ತೆಯು ಚಾಮರಾಜನಗರ ಮೂಲದ ಯುವಕನೊಂದಿಗೆ ಪ್ರೀತಿಯ ಬಲೆಗೆ ಬಿದ್ದಿದ್ದಳು. ಹೀಗಾಗಿ ಮನೆ ತೊರೆದು ಬಂದಿದ್ದ ಸಂತ್ರಸ್ತೆ ಜುಲೈ 27ರಂದು ಪಾರ್ಕ್ ಬದಿ ಓಡಾಡುತ್ತಿದ್ದಳು.
ಆಗ ಕರ್ತವ್ಯದಲ್ಲಿದ್ದ ಪವನ್, ಅಪ್ರಾಪ್ತೆಯನ್ನು ಪ್ರಶ್ನಿಸಿದಾಗ ಆಕೆ ಚಾಮರಾಜನಗರಕ್ಕೆ ಹೋಗಬೇಕೆಂದು ಹೇಳಿದ್ದರು. ಬಳಿಕ ಡ್ರಾಪ್ ಕೊಡುವುದಾಗಿ ನಂಬಿಸಿ ಮನೆಗೆ ಕರೆದೊಯ್ದು ಕಾನ್ಸ್ಟೇಬಲ್ ಅತ್ಯಾಚಾರ ಎಸಗಿದ್ದಾರೆ ಎಂದು ದೂರು ದಾಖಲಾಗಿದೆ.
RELATED TOPICS:
English summary :Constable arrested for raping minor on pretext of help