ಆರ್‌ಎಸ್‍ಎಸ್ ಪಾದದ ಧೂಳಿಗೂ ಸಿದ್ದರಾಮಯ್ಯ ಸಮವಿಲ್ಲ: ಈಶ್ವರಪ್ಪ | JANATA NEWS

ಶಿವಮೊಗ್ಗ : ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ. ರಾಜಕೀಯ ತೆವಲಿಗೆ ಹೇಳಿಕೆಗಳನ್ನು ನೀಡಬೇಡಿ ಎಂದು ನಗರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ಮಾಡಿದರು.
ಪರಿಹಾರದ ಬಿಕ್ಕಟ್ಟು ಗಲಭೆಗೆ ಕಾರಣವೆಂಬ ಸಿದ್ದರಾಮಯ್ಯನವರ ಹೇಳಿಕೆ ಕುರಿತಂತೆ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‍ಎಸ್ ಟೀಕಿಸಿದ್ದಕ್ಕೆ ಬಹಿರಂಗವಾಗಿ ಕ್ಷಮೆ ಕೇಳಬೇಕು. ಮೊದಲು ನಿಮ್ಮ ಬಾಯಿ ತೊಳೆದುಕೊಳ್ಳಿ. ನಿಮ್ಮಲ್ಲಿ ಕುರುಬ, ಒಕ್ಕಲಿಗ ಎಂದು ಗುಂಪುಗಾರಿಕೆ ಶುರುವಾಗಿದೆ. ಸಿದ್ದರಾಮಯ್ಯನವರೇ ಕುಡುಕರಂತೆ ಮಾತನಾಡಬೇಡಿ. ಒಂದೆರಡು ದಿನ ಆರ್‌ಎಸ್‍ಎಸ್ ಶಾಖೆಗೆ ಬನ್ನಿ. ಸ್ವಾಭಿಮಾನದಿಂದ ಬದುಕು ನಿಟ್ಟಿನಲ್ಲಿ ವಾತಾವರಣ ನಿರ್ಮಾಣ ಮಾಡಿದ್ದು ಆರ್‌ಎಸ್‍ಎಸ್. ದೇಶದಲ್ಲಿ ರಾಷ್ಟ್ರ ಭಕ್ತಿ ನಿರ್ಮಾಣ ಮಾಡಿದೆ. ಸಂಘದ ಕುರಿತು ಎಬಿಸಿ ಗೊತ್ತಿಲ್ಲ. ಕಾರ್ಯಕರ್ತನ ಪಾದದ ಧೂಳಿಗೂ ಸಮಾನ ಅಲ್ಲ. ಗಲಭೆಗೆ ಪರಿಹಾರದ ಬಿಕ್ಕಟ್ಟು ಕಾರಣ ಹೇಳಿಕೆಗೆ ನಾಚೀಗೆಡಾಗಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ಮಾಡಿದರು.
ದೇಶದ ಮೇಲೆ ಆಘಾತವಾದಾಗ, ವಿಕೋಪವಾದಾಗ ಆರ್‌ಎಸ್‍ಎಸ್ ಸ್ವಯಂ ಸೇವಕರು ಶ್ರಮ ಪಟ್ಟಿದ್ದಾರೆ. ಸ್ವಯಂ ಸೇವಕರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಏನು ಗೊತ್ತಿಲ್ಲ. ಆರ್‌ಎಸ್‍ಎಸ್ ಪಾದದ ಧೂಳಿಗೂ ಸಿದ್ದರಾಮಯ್ಯ ಸಮವಿಲ್ಲ. ದೇಶದ ಜನರ ಕ್ಷಮೆ ಕೇಳಬೇಕು. ರಾಷ್ಟ್ರದ್ರೋಹಿಗಳಿಗೆ ಇದುವರೆಗೂ ರಕ್ಷಣೆ ಕೊಡುತ್ತಾ ಬಂದಿರುವುದು ನೀವು ಎಂದು ಆಕ್ರೋಶ ಹೊರಹಾಕಿದ್ದಾರೆ.