ಮದುವೆಯಾದ ಎರಡುವರೆ ತಿಂಗಳಲ್ಲೇ ಬೇರೊಂದು ಯುವತಿ ಜತೆ ಪತಿ ಎಸ್ಕೇಪ್ | JANATA NEWS
ಬೆಂಗಳೂರು : ಮದುವೆಯಾದ ಎರಡೇ ತಿಂಗಳಿಗೆ ಪತಿ, ಪತ್ನಿಗೆ ಕೈಕೊಟ್ಟು ಬೇರೊಂದು ಯುವತಿಯೊಂದಿಗೆ ಎಸ್ಕೇಪ್ ಆಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ತ್ಯಾಮಗೊಂಡ್ಲುವಿನಲ್ಲಿ ನಡೆದಿದೆ.
ಪೂರ್ಣಿಮಾ(20), ಪ್ರದೀಪ್ (24), ಪರಸ್ಪರ ಎರಡು ವರ್ಷ ಲವ್ ಬಳಿಕ ಮದುವೆಯಾಗಿತ್ತು. ಮನೆಗೆ ಆಧಾರವಾಗಿರುತ್ತೇನೆಂದು ತಾಯಿ ಕಾಲಿಗೆ ಬಿದ್ದು ಮದುವೆಯಾಗಿದ್ದ. ಆದರೆ ಏಕಾಏಕಿ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಪತಿ ಬೇಕೆಂದು ಪತ್ನಿ ಪೂರ್ಣಿಮಾ ಮನೆ ಬಳಿ ಧರಣಿ ಮಾಡಿದ್ದು, ಅಜ್ಜಿ ವಿರೋಧದ ನಡುವೆಯೂ ಪೊಲೀಸರ ಸಹಾಯದಿಂದ ಮನೆ ತಲಾಶ್ ಮಾಡಿದ್ದು, ತಲಾಶ್ ವೇಳೆ ಮನೆಯಲ್ಲಿ ಪತಿ ಕಂಡುಬಂದಿಲ್ಲ.
ಜೂನ್1 ರಂದು ತುಮಕೂರಿನ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಹಣ, ಚಿನ್ನಾಭರಣಗಳನ್ನು ಕೊಟ್ಟು ಅದ್ದೂರಿಯಾಗಿ ವಿವಾಹವನ್ನು ಮಾಡಿಕೊಟ್ಟಿದ್ದರು. ಆದರೆ ಈಗ ಮದುವೆಯಾದ ಎರಡೇ ತಿಂಗಳಿಗೆ ಪತ್ನಿಯನ್ನು ಬಿಟ್ಟು ಪತಿ ಪ್ರದೀಪ್ ನಾಪತ್ತೆಯಾಗಿದ್ದಾನೆ, ಅಲ್ಲದೇ ಪ್ರದೀಪ್ ಬೇರೊಂದು ಯುವತಿಯನ್ನು ವಿವಾಹವಾಗಿದ್ದಾನೆ ಎಂಬ ಮಾತು ಕೇಳಿಬಂದಿದೆ.
ಘಟನೆ ಸಂಬಂಧ ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.